ಟೆಸ್ಟ್‌ ತಂಡಕ್ಕೆ ವಿರಾಟ್‌ ಕೊಹ್ಲಿ, ರಿಷಭ್ ವಾಪಸ್‌: ಬಾಂಗ್ಲಾ ಸರಣಿಗೆ ಆಯ್ಕೆ

KannadaprabhaNewsNetwork | Published : Sep 9, 2024 1:37 AM

ಸಾರಾಂಶ

ಬಾಂಗ್ಲಾ ವಿರುದ್ಧ 1ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ. ಯಶ್‌ ದಯಾಳ್‌ಗೆ ಚೊಚ್ಚಲ ಬಾರಿ ತಂಡದಲ್ಲಿ ಅವಕಾಶ. ಕೆ.ಎಲ್‌.ರಾಹುಲ್‌ಗೂ ಸ್ಥಾನ

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಸೆ.19ರಿಂದ ಚೆನ್ನೈನಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಭಾನುವಾರ ಭಾರತ ತಂಡ ಪ್ರಕಟಿಸಲಾಗಿದೆ. ಕಾರು ಅಪಘಾತದ 20 ತಿಂಗಳ ಬಳಿಕ ರಿಷಭ್‌ ಪಂತ್‌ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಜನವರಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಸರಣಿ ತಪ್ಪಿಸಿಕೊಂಡಿದ್ದ ವಿರಾಟ್‌ ಕೊಹ್ಲಿ ಕೂಡಾ ತಂಡಕ್ಕೆ ವಾಪಾಸಾಗಿದ್ದಾರೆ. ಕನ್ನಡಿಗ ಕೆ.ಎಲ್‌.ರಾಹುಲ್‌ ಕೂಡಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರೋಹಿತ್‌ ಶರ್ಮಾ ತಂಡದ ನಯಾಕತ್ವ ವಹಿಸಲಿದ್ದು. ಹಿರಿಯ ಆಟಗಾರರಾದ ಜಸ್‌ಪ್ರೀತ್‌ ಬೂಮ್ರಾ, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌ ತಂಡದಲ್ಲಿದ್ದಾರೆ. ಮೊಹಮದ್‌ ಶಮಿ ಅಲಭ್ಯರಾಗಲಿದ್ದಾರೆ. ಸರಣಿಯಲ್ಲಿ 2 ಪಂದ್ಯಗಳು ನಡೆಯಲಿದ್ದು, 2ನೇ ಪಂದ್ಯ ಸೆ.27ರಿಂದ ಅ.1ರ ವರೆಗೆ ಕಾನ್ಪುರದಲ್ಲಿ ನಿಗದಿಯಾಗಿದೆ.ತಂಡ: ರೋಹಿತ್‌(ನಾಯಕ), ಜೈಸ್ವಾಲ್‌, ಶುಭ್‌ಮನ್‌ ಗಿಲ್‌, ರಾಹುಲ್‌, ಸರ್ಫರಾಜ್‌, ರಿಷಭ್‌ ಪಂತ್‌, ಧ್ರುವ್‌ ಜುರೆಲ್‌, ಅಶ್ವಿನ್‌, ಜಡೇಜಾ, ಅಕ್ಷರ್‌, ಕುಲ್ದೀಪ್‌, ಸಿರಾಜ್‌, ಆಕಾಶ್‌ದೀಪ್‌, ಬೂಮ್ರಾ, ಯಶ್‌ ದಯಾಳ್‌.

ಯಶ್‌ಗೆ ಚಾನ್ಸ್‌: ಉತ್ತರ ಪ್ರದೇಶದ ಯುವ ವೇಗಿ ಯಶ್‌ ದಯಾಳ್‌ ಇದೇ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.ಅಂತಾರಾಷ್ಟ್ರೀಯ ಕ್ರಿಕೆಟಿಗೆ ಇಂಗ್ಲೆಂಡ್‌ನ ಅಲಿ ಗುಡ್‌ಬೈ

ಲಂಡನ್‌: ಇಂಗ್ಲೆಂಡ್‌ನ ಖ್ಯಾತ ಆಲ್‌ರೌಂಡರ್ ಮೊಯಿನ್‌ ಅಲಿ, ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತಮ್ಮ ಹೆಸರು ಪರಿಗಣಿಸದ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಅತ್ಯುನ್ನತ ಮಟ್ಟದಲ್ಲಿ ಇನ್ನೂ ಆಡುವ ಸಾಮರ್ಥ್ಯ ನನಗಿದೆ ಎಂದು ನನಗನ್ನಿಸುತ್ತಿದೆ. ಆದರೆ ನಾನು ವಾಸ್ತವತೆ ಅರಿತುಕೊಂಡಿದ್ದೇನೆ. ಇದು ಹೊಸ ತಲೆಮಾರಿನ ಸಮಯ. ನನ್ನ ಪಾಲಿನದ್ದನ್ನು ನಾನು ಮಾಡಿದ್ದೇನೆ. ಇದು ವಿದಾಯದ ಸಮಯ ಎಂದು ಅನ್ನಿಸುತ್ತಿದೆ. ಎಂದು ಅಲಿ ಸಂದರ್ಶನವೊಂದರಲ್ಲಿ ಹೇಳುವ ಮೂಲಕ ವಿದಾಯ ಪ್ರಕಟಿಸಿದ್ದಾರೆ. ಅಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 138 ಏಕದಿನ, 92 ಟಿ20 ಮತ್ತು 68 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

Share this article