ವಿಂಬಲ್ಡನ್‌ನಲ್ಲಿನ್ನು ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು : ಲೈನ್‌ ಜಡ್ಜ್‌ ಬದಲು ಎಐ ಬಳಸಲು ನಿರ್ಧಾರ!

KannadaprabhaNewsNetwork |  
Published : Oct 10, 2024, 02:30 AM ISTUpdated : Oct 10, 2024, 04:14 AM IST
ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 2025ರಿಂದ ಲೈನ್‌ ಜಡ್ಜ್‌ಗಳ ಬದಲು ಎಐ ತಂತ್ರಜ್ಞಾನವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ.  | Kannada Prabha

ಸಾರಾಂಶ

ವಿಂಬಲ್ಡನ್‌ನಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು. ಲೈನ್‌ ಜಡ್ಜ್‌ಗಳ ಬದಲು ಕೃತಕ ಬುದ್ಧಿಮತ್ತೆ ಬಳಕೆ ಮಾಡಲು ಆಲ್‌ ಇಂಗ್ಲೆಂಡ್‌ ಕ್ಲಬ್‌ ನಿರ್ಧಾರ. 2025ರಿಂದ ಈ ವ್ಯವಸ್ಥೆ ಜಾರಿ.

ಲಂಡನ್‌: 147 ವರ್ಷಗಳ ಇತಿಹಾಸವಿರುವ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಇನ್ಮುಂದೆ ಲೈನ್‌ ಜಡ್ಜ್‌ಗಳು ಇರುವುದಿಲ್ಲ. ವಿಂಬಲ್ಡನ್‌ ಆಯೋಜಕರಾದ ಆಲ್‌ ಇಂಗ್ಲೆಂಡ್‌ ಕ್ಲಬ್‌, ಟೂರ್ನಿಯಲ್ಲಿ ಸರ್ವಿಸ್‌ ಫಾಲ್ಟ್‌, ಔಟ್ ತೀರ್ಪುಗಳನ್ನು ನೀಡಲು 2025ರಿಂದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಕೆ ಮಾಡಲು ನಿರ್ಧರಿಸಿದೆ.

ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಲಿ ಬೋಲ್ಟನ್‌, ‘ಟೂರ್ನಿ ಇಷ್ಟು ವರ್ಷ ಯಶಸ್ವಿಯಾಗಿ ನಡೆಯಲು ಲೈನ್‌ ಜಡ್ಜ್‌ಗಳ ಕೊಡುಗೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಆದರೆ ಕಾಲ ಬದಲಾದಂತೆ ತಂತ್ರಜ್ಞಾನದ ಬಳಕೆಯೂ ಮುಖ್ಯವಾಗಲಿದೆ. ಮತ್ತಷ್ಟು ಪಾರದರ್ಶಕ ಆಟಕ್ಕೆ ಎಐನಿಂದ ಅನುಕೂಲವಾಗಲಿದೆ. 

ಹಲವು ವರ್ಷಗಳಿಂದ ಇರುವ ಬಾಲ್‌ ಟ್ರ್ಯಾಕಿಂಗ್‌ ವ್ಯವಸ್ಥೆಯೂ ಮುಂದುವರಿಯಲಿದೆ, ಕಳೆದ ವರ್ಷ ಟೂರ್ನಿಯಲ್ಲಿ ಎಐ ಅನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿದ್ದೆವು. ಅದರಿಂದ ಸಿಕ್ಕ ಫಲಿತಾಂಶವನ್ನು ಪರಿಗಣಿಸಿ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!