ವಿಶ್ವಕಪ್‌: ಬಾಂಗ್ಲಾ ವಿರುದ್ಧ ಕಿವೀಸ್‌ಗೆ 100 ರನ್‌ ಜಯ

Published : Oct 11, 2025, 12:11 PM IST
AUS W vs NZ W Womens World Cup 2025

ಸಾರಾಂಶ

ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಸತತ 2 ಸೋಲು ಕಂಡಿದ್ದ ನ್ಯೂಜಿಲೆಂಡ್‌ ತಂಡ ಮೊದಲ ಗೆಲುವು ದಾಖಲಿಸಿದೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಕಿವೀಸ್‌ 100 ರನ್‌ ಜಯಗಳಿಸಿತು. ಬಾಂಗ್ಲಾ 3 ಪಂದ್ಯಗಳಲ್ಲಿ 2ನೇ ಸೋಲು ಕಂಡಿತು.

ಗುವಾಹಟಿ: ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಸತತ 2 ಸೋಲು ಕಂಡಿದ್ದ ನ್ಯೂಜಿಲೆಂಡ್‌ ತಂಡ ಮೊದಲ ಗೆಲುವು ದಾಖಲಿಸಿದೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಕಿವೀಸ್‌ 100 ರನ್‌ ಜಯಗಳಿಸಿತು. ಬಾಂಗ್ಲಾ 3 ಪಂದ್ಯಗಳಲ್ಲಿ 2ನೇ ಸೋಲು ಕಂಡಿತು.

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 9 ವಿಕೆಟ್‌ಗೆ 227 ರನ್‌ ಕಲೆಹಾಕಿತು. ನಾಯಕಿ ಸೋಫಿ ಡಿವೈನ್‌ 63, ಬ್ರೂಕ್‌ ಹಾಲಿಡೇ 69 ರನ್‌ ಸಿಡಿಸಿದರು. ಬಾಂಗ್ಲಾ ಪರ ರಬೆಯಾ ಖಾನ್‌ 3 ವಿಕೆಟ್‌ ಪಡೆದರು. ಸ್ಪರ್ಧಾತ್ಮಕ ಗುರಿ ಪಡೆದ ಬಾಂಗ್ಲಾ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿ, 39.5 ಓವರ್‌ಗಳಲ್ಲಿ 127 ರನ್‌ಗೆ ಆಲೌಟಾಯಿತು. ಫಹಿಮಾ ಖಾತೂನ್‌ 34, ರಬೆಯಾ 25 ರನ್‌ ಗಳಿಸಿದರು. ಕಿವೀಸ್‌ ಪರ ಜೆಸ್‌ ಕೇರ್‌, ಲೀ ತಹುಹು ತಲಾ 3 ವಿಕೆಟ್ ಕಿತ್ತರು.

ಇಂದು ಇಂಗ್ಲೆಂಡ್‌ vs ಶ್ರೀಲಂಕಾ

ಕೊಲಂಬೊ: ಶನಿವಾರದ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಶ್ರೀಲಂಕಾ ಸವಾಲು ಎದುರಾಗಲಿದೆ. ಇಂಗ್ಲೆಂಡ್‌ ಸತತ 2ರಲ್ಲಿ ಗೆದ್ದಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಆರಂಭಿಕ ಎರಡೂ ಪಂದ್ಯ ಸೋತಿರುವ ಲಂಕಾ, ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.

PREV
Read more Articles on

Recommended Stories

ಕಾಂತಾರ ಚಾಪ್ಟರ್‌ 1 : ಮೊದಲ ವಾರದಲ್ಲೇ ರೂ.509 ಕೋಟಿ ಗಳಿಕೆ
ಜೈಸ್ವಾಲ್‌ 173, ಭಾರತ 318/2 - ವೆಸ್ಟ್‌ಇಂಡೀಸ್‌ ವಿರುದ್ಧ 2ನೇ ಟೆಸ್ಟ್‌