ಡಬ್ಲ್ಯುಪಿಎಲ್‌: ಡೆಲ್ಲಿಗೆ ಶರಣಾದ ಮುಂಬೈ

KannadaprabhaNewsNetwork | Updated : Mar 06 2024, 08:45 AM IST

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್‌ ಡಬ್ಲ್ಯುಪಿಎಲ್‌ 2ನೇ ಆವೃತ್ತಿಯಲ್ಲಿ ತನ್ನ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದು, 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ ಡಬ್ಲ್ಯುಪಿಎಲ್‌ 2ನೇ ಆವೃತ್ತಿಯಲ್ಲಿ ತನ್ನ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದು, 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳ ಗೆಲುವು ಸಾಧಿಸಿದ ಡೆಲ್ಲಿ, ತನ್ನ ನೆಟ್‌ ರನ್‌ರೇಟ್‌ ಅನ್ನೂ ಉತ್ತಮಪಡಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಜೆಮಿಮಾ ರೋಡ್ರಿಗ್ಸ್‌ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌ರ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 192 ರನ್‌ ಕಲೆಹಾಕಿತು. 

ದೊಡ್ಡ ಗುರಿ ಬೆನ್ನತ್ತಿದ ಮುಂಬೈ 20 ಓವರಲ್ಲಿ 8 ವಿಕೆಟ್‌ಗೆ 162 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.ಪವರ್‌-ಪ್ಲೇನಲ್ಲೇ ಮುಂಬೈ, ಯಸ್ತಿಕಾ (06), ನಥಾಲಿ ಸ್ಕೀವರ್‌ ಬ್ರಂಟ್‌ (05), ಹರ್ಮನ್‌ಪ್ರೀತ್‌ ಕೌರ್‌ (06) ಹಾಗೂ ಹೇಯ್ಲಿ ಮ್ಯಾಥ್ಯೂಸ್‌ (29)ರ ವಿಕೆಟ್‌ಗಳನ್ನು ಕಳೆದುಕೊಂಡಿತು. 

ಕೊನೆಯಲ್ಲಿ ಅಮನ್‌ಜೋತ್‌ ಕೌರ್‌ 27 ಎಸೆತದಲ್ಲಿ 42, ಸಜೀವನ್‌ ಸಜನಾ 14 ಎಸೆತದಲ್ಲಿ ಔಟಾಗದೆ 24 ರನ್‌ ಗಳಿಸಿ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿದರು.

ಇದಕ್ಕೂ ಮುನ್ನ ಜೆಮಿಮಾ 33 ಎಸೆತದಲ್ಲಿ 69 ರನ್‌, ಲ್ಯಾನಿಂಗ್‌ 38 ಎಸೆತದಲ್ಲಿ 53 ರನ್‌ ಸಿಡಿಸಿದ ಪರಿಣಾಮ ಡೆಲ್ಲಿ ಬೃಹತ್‌ ಮೊತ್ತ ಕಲೆಹಾಕಿತು.

ಸ್ಕೋರ್‌: ಡೆಲ್ಲಿ 192/4 (ಜೆಮಿಮಾ 69*, ಲ್ಯಾನಿಂಗ್‌ 53, ಪೂಜಾ 1-20), ಮುಂಬೈ 163/8 (ಅಮನ್‌ಜೋನ್‌ 42, ಸಜನಾ 24*, ಜೊನಾನ್ಸನ್‌ 3-21)

Share this article