ಮುಂದಿನ ಋತುವಿನ ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ಪುರುಷರ ತಂಡಕ್ಕೆ ಕೋಚ್‌ ಆಗಿ ಮತ್ತೆ ಯೆರೇಗೌಡ್‌

KannadaprabhaNewsNetwork |  
Published : Aug 16, 2024, 12:56 AM ISTUpdated : Aug 16, 2024, 04:19 AM IST
ಯೆರೇ ಗೌಡ್ | Kannada Prabha

ಸಾರಾಂಶ

ಇತ್ತೀಚೆಗಷ್ಟೇ ಯೆರೇಗೌಡ್‌ ಅವರ ಕೋಚ್‌ ಅವಧಿಯಲ್ಲೇ ಕರ್ನಾಟಕ ಅಂಡರ್‌-23 ತಂಡ ಸಿಕೆ ನಾಯ್ಡು ಟ್ರೋಫಿಯಲ್ಲಿ ಚಾಂಪಿಯನ್‌ ಆಗಿತ್ತು.

ಬೆಂಗಳೂರು: ಮಾಜಿ ಕ್ರಿಕೆಟಿಗ ಕೆ.ಯೆರೇಗೌಡ್‌ ಅವರು ಮುಂದಿನ ಋತುವಿನ ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ಪುರುಷರ ತಂಡಕ್ಕೆ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಘೋಷಿಸಿದೆ.

ಯೆರೇಗೌಡ್‌ ಈ ಮೊದಲು 2018ರಿಂದ 2021ರ ವರೆಗೂ ಕೋಚ್‌ ಆಗಿದ್ದರು. ಕಳೆದ 2 ವರ್ಷಗಳಿಂದ ಪಿ.ವಿ. ಶಶಿಕಾಂತ್‌ ರಾಜ್ಯ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಮತ್ತೆ ಕೋಚ್‌ ಸ್ಥಾನಕ್ಕೆ ಯೆರೇಗೌಡ್‌ ನೇಮಕಗೊಂಡಿದ್ದಾರೆ. ಇತ್ತೀಚೆಗಷ್ಟೇ ಯೆರೇಗೌಡ್‌ ಅವರ ಕೋಚ್‌ ಅವಧಿಯಲ್ಲೇ ಕರ್ನಾಟಕ ಅಂಡರ್‌-23 ತಂಡ ಸಿಕೆ ನಾಯ್ಡು ಟ್ರೋಫಿಯಲ್ಲಿ ಚಾಂಪಿಯನ್‌ ಆಗಿತ್ತು. ಇದೇ ವೇಳೆ, ರಾಜ್ಯ ಹಿರಿಯರ ತಂಡಕ್ಕೆ ಮನ್ಸೂರ್‌ ಅಲಿ ಖಾನ್‌ ಬೌಲಿಂಗ್‌ ಕೋಚ್ ಆಗಿ ಮುಂದುವರಿಯಲಿದ್ದು, ಶಬರೀಶ್‌ ಮೋಹನ್‌ ಪೀಲ್ಡಿಂಗ್‌ ಕೋಚ್‌ ಆಗಿರಲಿದ್ದಾರೆ. ಅಂಡರ್‌-23 ತಂಡಕ್ಕೆ ಸೋಮಶೇಖರ್‌ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. 

ಎನ್‌ಸಿಎ ಮುಖ್ಯಸ್ಥರಾಗಿ ಲಕ್ಷ್ಮಣ್‌ ಮುಂದುವರಿಕೆ?

ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಇನ್ನೂ ಒಂದು ವರ್ಷ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಲಕ್ಷ್ಮಣ್‌ 2021ರಿಂದಲೂ ಎನ್‌ಸಿಎ ಮುಖ್ಯಸ್ಥರಾಗಿದ್ದು, ಅವರ ಅವಧಿ ಈ ವರ್ಷ ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ. ಆದರೆ ಬಿಸಿಸಿಐ ಲಕ್ಷ್ಮಣ್‌ರ ಅವಧಿಯನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ, ಲಕ್ಷ್ಮಣ್‌ ಐಪಿಎಲ್‌ ತಂಡವೊಂದಕ್ಕೆ ಮುಖ್ಯ ಕೋಚ್‌ ಆಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಅವರು ಎನ್‌ಸಿಎಯಲ್ಲೇ ಮುಂದುವರಿಯುವ ಸಾಧ್ಯತೆ ಹೆಚ್ಚು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?
ಆರ್‌ಸಿಬಿ ಖರೀದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಆಸಕ್ತಿ!