ಓಸ್ಲೊ(ನಾರ್ವೆ): ಪ್ರತಿಷ್ಠಿತ ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಚಾಂಪಿಯನ್ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟೂರ್ನಿಯಲ್ಲಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೂರ್ನಿಯಲ್ಲಿ 7 ಬಾರಿ ಚಾಂಪಿಯನ್
ಟೂರ್ನಿಯಲ್ಲಿ 7 ಬಾರಿ ಚಾಂಪಿಯನ್, ವಿಶ್ವ ನಂ.1 ಮ್ಯಾಗ್ಸನ್ ಕಾರ್ಲ್‌ಸನ್(2 ಬಾರಿ) ಸೇರಿ ಪ್ರಮುಖರನ್ನು ಸೋಲಿಸಿದ್ದ 20 ವರ್ಷದ ಚೆನ್ನೈ ಆಟಗಾರ ಪ್ರಜ್ಞಾನಂದ, ಶುಕ್ರವಾರ ನಡೆದ ಕೊನೆ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಗೆಲ್ಲುವ ಮೂಲಕ ಒಟ್ಟು 18 ಅಂಕದೊಂದಿಗೆ ಚಾಂಪಿಯನ್ ಎನಿಸಿಕೊಂಡರು. 6 ಆಟಗಾರರ ಟೂರ್ನಿಯ ಆರಂಭದಲ್ಲಿ ಪ್ರಜ್ಞಾನಂದ ಸಾಧಾರಣ ಆಟ ಪ್ರದರ್ಶಿಸಿದರೂ, ಬಳಿಕ ಸತತ ಗೆಲುವಿನೊಂದಿಗೆ ಅಗ್ರಸ್ಥಾನಿಯಾದರು.
ಅದ್ಭುತ ಮೈಲುಗಲ್ಲು
ಈ ಗಮನಾರ್ಹ ಸಾಧನೆಗಾಗಿ ಪ್ರಜ್ಞಾನಂದ ಅವರಿಗೆ ಅಭಿನಂದನೆಗಳು. ಇದು ನಿಜಕ್ಕೂ ಅವರ ನಿರಂತರ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಅದ್ಭುತ ಮೈಲುಗಲ್ಲು. ಅವರ ಭವಿಷ್ಯ ಉಜ್ವಲವಾಗಲಿ.
ನರೇಂದ್ರ ಮೋದಿ, ಪ್ರಧಾನ ಮಂತ್ರಿ
