ಇರಾನ್‌, ಇಸ್ರೇಲ್‌ ವಿರುದ್ಧ ಟ್ರಂಪ್‌ ಗುಡುಗು

KannadaprabhaNewsNetwork |  
Published : Jun 17, 2026, 03:15 AM IST
ಟ್ರಂಪ್ | Kannada Prabha

ಸಾರಾಂಶ

ಇರಾನ್‌ ಜತೆಗಿನ ಯುದ್ಧ ಅಂತ್ಯವಾದ ಬಳಿಕವೂ ಶತ್ರುದೇಶದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್ ಅಣ್ವಸ್ತ್ರ ಪಡೆಯಲು ಪ್ರಯತ್ನಿಸಿದರೆ ನರಕ ದರ್ಶನವಾಗುತ್ತದೆ ಎಂದು ಮಂಗಳವಾರ ಗುಡುಗಿದ್ದಾರೆ. ಅಲ್ಲದೆ, ಇಸ್ರೇಲ್‌ ವಿರುದ್ಧವೂ ಕಿಡಿಕಾರಿರುವ ಅವರು, ಇಸ್ರೇಲ್‌, ಲೆಬನಾನ್‌ನ ಹಿಜ್ಬುಲ್ಲಾ ಮೇಲೆ ದಾಳಿ ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.

- ಇರಾನ್‌ ಅಣ್ವಸ್ತ್ರ ಹೊಂದಿದರೆ ನರಕ ದರ್ಶನ

-ಇಸ್ರೇಲ್‌ ಹಿಜ್ಬುಲ್ಲಾ ಮೇಲೆ ದಾಳಿ ನಿಲ್ಲಿಸಲಿ

ಪ್ಯಾರಿಸ್‌: ಇರಾನ್‌ ಜತೆಗಿನ ಯುದ್ಧ ಅಂತ್ಯವಾದ ಬಳಿಕವೂ ಶತ್ರುದೇಶದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್ ಅಣ್ವಸ್ತ್ರ ಪಡೆಯಲು ಪ್ರಯತ್ನಿಸಿದರೆ ನರಕ ದರ್ಶನವಾಗುತ್ತದೆ ಎಂದು ಮಂಗಳವಾರ ಗುಡುಗಿದ್ದಾರೆ. ಅಲ್ಲದೆ, ಇಸ್ರೇಲ್‌ ವಿರುದ್ಧವೂ ಕಿಡಿಕಾರಿರುವ ಅವರು, ಇಸ್ರೇಲ್‌, ಲೆಬನಾನ್‌ನ ಹಿಜ್ಬುಲ್ಲಾ ಮೇಲೆ ದಾಳಿ ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಅಮೆರಿಕ-ಇರಾನ್ ಒಪ್ಪಂದವು ಅಣ್ವಸ್ತ್ರಕ್ಕೆ ತಡೆಗೋಡೆಯಾಗಿದೆ. ಒಪ್ಪಂದದ ಪ್ರಕಾರ ಇರಾನ್‌ ಅಣ್ವಸ್ತ್ರ ಹೊಂದುವಂತಿಲ್ಲ. ಹಾಗೇನಾದರೂ ಮಾಡಿದರೆ ಅದಕ್ಕೆ ನರಕ ದರ್ಶನವಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.ಹಿಜ್ಬುಲ್ಲಾ ಮೇಲೆ ದಾಳಿ ಬೇಡ- ಇಸ್ರೇಲ್‌ಗೆ ಕರೆ:ಇದೇ ವೇಳೆ, ಸಿರಿಯಾದ ಹಿಜ್ಬುಲ್ಲಾ ಉಗ್ರರ ಮೇಲಿನ ದಾಳಿ ನಿಲ್ಲಿಸುವಂತೆ ಮಿತ್ರ ಇಸ್ರೇಲ್‌ಗೆ ಕರೆ ನೀಡಿದ ಟ್ರಂಪ್, ‘ಇಸ್ರೇಲ್‌ ಹಿಜ್ಬುಲ್ಲಾ ವಿರುದ್ಧ ತುಂಬಾ ಸಮಯದಿಂದ ಹೋರಾಡುತ್ತಿದೆ. ಹಲವಾರು ಜನ ಕೊಲ್ಲಲ್ಪಡುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಸಿರಿಯಾ ಹಿಜ್ಬುಲ್ಲಾವನ್ನು ನೋಡಿಕೊಳ್ಳಲಿ ಎಂದು ನಾನು ಇಸ್ರೇಲ್‌ಗೆ ಸೂಚಿಸಿದ್ದೆ. ಏಕೆಂದರೆ ಅವರು ಅದರಲ್ಲಿ ಉತ್ತಮ ಕೆಲಸ ಮಾಡುತ್ತಾರೆಂದು ಭಾವಿಸುತ್ತೇನೆ’ ಎಂದಿದ್ದಾರೆ. ಅಲ್ಲದೆ, ‘ನಾನಿಲ್ಲದೇ ಇಸ್ರೇಲ್‌ ಇಲ್ಲ’ ಎಂದೂ ಕುಟುಕಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಮೋದಿ ಇರುವವರೆಗೆ ಭಾರತವನ್ನು ಮುಟ್ಟಲು ಬಿಡಲ್ಲ: ಟ್ರಂಪ್‌ ಅಭಯ
ತೈಲ, ಅನಿಲ ಪೂರೈಕೆ ಸಹಜ ಸ್ಥಿತಿಗೆ ಮರಳುವ ಆಶಾಕಿರಣ