ಅಮೆರಿಕದಲ್ಲಿ 22 ಭಾರತೀಯರಿದ್ದ ಹಡಗು ಸೇತುವೆಗೆ ಡಿಕ್ಕಿ: ಬಾಲ್ಟಿಮೋರ್‌ನ ಸೇತುವೆ ಧ್ವಂಸ

KannadaprabhaNewsNetwork |  
Published : Mar 27, 2024, 01:01 AM ISTUpdated : Mar 27, 2024, 12:45 PM IST
ಹಡಗು | Kannada Prabha

ಸಾರಾಂಶ

ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿರುವ ಕರಾವಳಿ ನಗರ ಬಾಲ್ಟಿಮೋರ್‌ನ ಪ್ಯಾಟಾಪ್ಸ್ಕೋ ನದಿಯ ಮೇಲೆ ಕಟ್ಟಲಾಗಿದ್ದ ಸೇತುವೆಗೆ ಶ್ರೀಲಂಕಾಗೆ ಬರುತ್ತಿದ್ದ ಸರಕು ಸಾಗಾಣೆ ಹಡಗೊಂದು ಡಿಕ್ಕಿ ಹೊಡೆದಿದೆ.

ಬಾಲ್ಟಿಮೋರ್‌: ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿರುವ ಕರಾವಳಿ ನಗರ ಬಾಲ್ಟಿಮೋರ್‌ನ ಪ್ಯಾಟಾಪ್ಸ್ಕೋ ನದಿಯ ಮೇಲೆ ಕಟ್ಟಲಾಗಿದ್ದ ಸೇತುವೆಗೆ ಶ್ರೀಲಂಕಾಗೆ ಬರುತ್ತಿದ್ದ ಸರಕು ಸಾಗಾಣೆ ಹಡಗೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸೇತುವೆ ಧ್ವಂಸವಾಗಿದೆ., ಸೇತುವೆ ಮೇಲಿದ್ದ ಹಲವು ವಾಹನಗಳು ನೀರಿಗೆ ಬಿದ್ದಿವೆ,

ಈ ಅವಗಢದಲ್ಲಿ ನದಿ ನೀರಿನಲ್ಲಿ ಹತ್ತಾರು ಅಧಿಕ ಮಂದಿ ಮುಳುಗಿರುವ ಶಂಕೆಯಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಉಳಿದವರಿಗೆ ಶೋಧಕಾರ್ಯ ನಡೆಸಲಾಗುತ್ತಿದೆ.

ಫ್ರಾನ್ಸಿಸ್‌ ಸ್ಕಾಟ್‌ ಕೀ ಬ್ರಿಡ್ಜ್‌ 1977ರಿಂದ ಸಂಚಾರಕ್ಕೆ ಮುಕ್ತವಾಗಿದ್ದು, ಬಂದರಿಗೆ ಪ್ರಮುಖ ಸಂಪರ್ಕ ಸೇತುವಾಗಿ ಬಳಕೆಯಾಗುತ್ತಿತ್ತು. ಹಡಗು ಡಿಕ್ಕಿ ಹೊಡೆದ ಕೂಡಲೇ ಬೆಂಕಿ ಹೊತ್ತಿಕೊಂಡು ನೀರಿನಲ್ಲಿ ಮುಳುಗಿದೆ.

ಭಾರತೀಯ ಸಿಬ್ಬಂದಿ ಸಮಯಪ್ರಜ್ಞೆಯಿಂದ ಜೀವರಕ್ಷಣೆ: ಗವರ್ನರ್‌

ಅಮೆರಿಕದ ಹಡಗಿನಲ್ಲಿದ್ದ 22 ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ನೂರಾರು ಜೀವಗಳು ಉಳಿದಿವೆ. ಸಮಯಪ್ರಜ್ಞೆ ಮೆರೆದ ಭಾರತೀಯ ಸಿಬ್ಬಂದಿ ನಿಜವಾದ ಹೀರೋಗಳು ಎಂದು ಮೇರಿಲ್ಯಾಂಡ್ ಗವರ್ನರ್ ಶ್ಲಾಘಿಸಿದ್ದಾರೆ.

ಭಾರತೀಯ ಸಿಬ್ಬಂದಿಯು ಹಡಗು ದಿಕ್ಕುತಪ್ಪಿ ವೇಗವಾಗಿ ಧಾವಿಸುತ್ತಿದೆ ಎಂಬ ‘ಮೇ ಡೇ’ ಸಂದೇಶವನ್ನು ಕಳಿಸಿದರು. ಹಡಗು ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆಯುವ ಕೆಲವೇ ಕ್ಷಣಗಳ ಮೊದಲು ಮೇಡೇ ಕರೆ ಬಂತು. 

ಆಗ ಕೂಡಲೇ ರಸ್ತೆ ಸಂಚಾವ ನಿಲ್ಲಿಸಲಾಯಿತು. ಇದು ಮತ್ತಷ್ಟು ಜೀವಗಳನ್ನು ಉಳಿಸಲು ಸಹಾಯ ಮಾಡಿತು ಎಂದು ಮೇರಿಲ್ಯಾಂಡ್‌ನ ಗವರ್ನರ್ ಹೇಳಿದ್ದಾರೆ.

22 ಭಾರತೀಯರಿದ್ದ ಹಡಗು ಸೇತುವೆಗೆ ಸಿಕ್ಕಿ

ಬಾಲ್ಟಿಮೋರ್‌: ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿರುವ ಕರಾವಳಿ ನಗರ ಬಾಲ್ಟಿಮೋರ್‌ನ ಪ್ಯಾಟಾಪ್ಸ್ಕೋ ನದಿಯ ಮೇಲೆ ಕಟ್ಟಲಾಗಿದ್ದ ಸೇತುವೆಗೆ 22 ಭಾರತೀಯ ಸಿಬ್ಬಂದಿ ಇದ್ದ ಸರಕು ಸಾಗಾಣೆ ಹಡಗೊಂದು ಡಿಕ್ಕಿ ಹೊಡೆದಿದೆ. 

ಇದರ ಪರಿಣಾಮ ಸೇತುವೆ ಧ್ವಂಸವಾಗಿದೆ. ಸೇತುವೆ ಮೇಲಿದ್ದ ಹಲವು ವಾಹನಗಳು ನೀರಿಗೆ ಬಿದ್ದಿವೆ.ಈ ಅವಗಢದಲ್ಲಿ ನದಿ ನೀರಿನಲ್ಲಿ ಹತ್ತಾರು ಅಧಿಕ ಮಂದಿ ಮುಳುಗಿರುವ ಶಂಕೆಯಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. 

ಉಳಿದವರಿಗೆ ಶೋಧಕಾರ್ಯ ನಡೆಸಲಾಗುತ್ತಿದೆ. ಸಿಂಗಾಪುರ ಕಂಪನಿಯ ಈ ಹಡಗು ಸರಕು ಹೊತ್ತು ಶ್ರೀಲಂಕಾಗೆ ಸಾಗುತ್ತಿತ್ತು. ಆದರೆ ಇದು ಡಿಕ್ಕಿ ಹೊಡದಿದ್ದು ಏಕೆ? ದುಷ್ಕೃತ್ಯದ ಸಂಚು ಇದೆಯೇ ಎಂಬ ಬಗ್ಗೆ ತನಿಖೆ ಸಾಗಿದೆ.

ಫ್ರಾನ್ಸಿಸ್‌ ಸ್ಕಾಟ್‌ ಕೀ ಬ್ರಿಡ್ಜ್‌ 1977ರಿಂದ ಸಂಚಾರಕ್ಕೆ ಮುಕ್ತವಾಗಿದ್ದು, ಬಂದರಿಗೆ ಪ್ರಮುಖ ಸಂಪರ್ಕ ಸೇತುವಾಗಿ ಬಳಕೆಯಾಗುತ್ತಿತ್ತು. ಹಡಗು ಡಿಕ್ಕಿ ಹೊಡೆದ ಕೂಡಲೇ ಬೆಂಕಿ ಹೊತ್ತಿಕೊಂಡು ನೀರಿನಲ್ಲಿ ಮುಳುಗಿದೆ.

PREV

Recommended Stories

ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!
ನಾವು ಯುದ್ಧ ಮಾಡಲ್ಲ : ಟ್ರಂಪ್‌ ತೆರಿಗೆ ದಾಳಿಗೆ ಚೀನಾದ ತಿರುಗೇಟು