ಇರಾನ್‌ನೊಂದಿಗೆ ಸಂಘರ್ಷ ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ, ತನ್ನ ನೌಕಾಪಡೆಯ ಮುಂಚೂಣಿ ದಾಳಿಯ ನೌಕೆಗಳನ್ನು ಅಮೆರಿಕ ಸರ್ಕಾರವು ಮಧ್ಯಪ್ರಾಚ್ಯದತ್ತ ರವಾನಿಸಿದೆ. ಇದರೊಂದಿಗೆ ಇರಾನ್‌ ಮೇಲೆ ಅಮೆರಿಕದ ದಾಳಿ ಮತ್ತಷ್ಟು ಸನ್ನಿಹಿತವಾಗಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

 ವಾಷಿಂಗ್ಟನ್‌: ಇರಾನ್‌ನೊಂದಿಗೆ ಸಂಘರ್ಷ ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ, ತನ್ನ ನೌಕಾಪಡೆಯ ಮುಂಚೂಣಿ ದಾಳಿಯ ನೌಕೆಗಳನ್ನು ಅಮೆರಿಕ ಸರ್ಕಾರವು ಮಧ್ಯಪ್ರಾಚ್ಯದತ್ತ ರವಾನಿಸಿದೆ. ಇದರೊಂದಿಗೆ ಇರಾನ್‌ ಮೇಲೆ ಅಮೆರಿಕದ ದಾಳಿ ಮತ್ತಷ್ಟು ಸನ್ನಿಹಿತವಾಗಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಮಧ್ಯಪ್ರಾಚ್ಯವನ್ನು ಒಳಗೊಂಡ ಪ್ರದೇಶಕ್ಕೆ ತೆರಳಲು ಸೂಚಿಸಿದೆ

ಸದ್ಯ ದಕ್ಷಿಣ ಚೀನಾ ವಲಯದಲ್ಲಿ ಬೀಡುಬಿಟ್ಟಿದ್ದ ‘ಯುಎಸ್‌ಎಸ್‌ ಅಬ್ರಹಾಂ ಲಿಂಕನ್‌’ ಯುದ್ಧನೌಕೆ, ಅದರ ಭಾಗವಾಗಿರುವ ಹಲವು ದಾಳಿ ನೌಕೆಗಳು, ನೌಕಾಪಡೆಯ ಭಾಗವಾದ ಯುದ್ಧ ವಿಮಾನಗಳು ಮತ್ತು ಕನಿಷ್ಠ ಒಂದು ಸಬ್‌ಮರೀನ್‌ ಅನ್ನು ಅಮೆರಿಕ ಇದೀಗ ‘ದ ಯುಎಸ್‌ ಸೆಂಟ್ರಲ್‌ ಕಮಾಂಡ್‌’ ಎಂದು ಕರೆಯಲ್ಪಡುವ, ಮಧ್ಯಪ್ರಾಚ್ಯವನ್ನು ಒಳಗೊಂಡ ಪ್ರದೇಶಕ್ಕೆ ತೆರಳಲು ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ನ್ಯೂಸ್‌ ನೇಷನ್‌ ಸುದ್ದಿ ವಾಹಿನಿ ವರದಿ ಮಾಡಿದೆ.

ದ ಯುಎಸ್‌ ಸೆಂಟ್ರಲ್‌ ಕಮಾಂಡ್‌’ ಎಂದು ಗುರುತಿಸಲಾಗಿರುವ ಈ ಪ್ರದೇಶ

‘ದ ಯುಎಸ್‌ ಸೆಂಟ್ರಲ್‌ ಕಮಾಂಡ್‌’ ಎಂದು ಗುರುತಿಸಲಾಗಿರುವ ಈ ಪ್ರದೇಶವು ಈಶಾನ್ಯ ಆಫ್ರಿಕಾ, ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ದಕ್ಷಿಣ ಏಷ್ಯಾ ಸೇರಿದಂತೆ 21 ದೇಶಗಳನ್ನು ಒಳಗೊಂಡ 40 ಲಕ್ಷ ಚದರ ಮೈಲು ಪ್ರದೇಶವನ್ನು ಒಳಗೊಂಡಿದೆ. ಇದರಲ್ಲಿ ಇರಾನ್‌, ಈಜಿಪ್ಟ್‌, ಇರಾಕ್‌, ಅಫ್ಘಾನಿಸ್ತಾನ, ಪಾಕಿಸ್ತಾನದ ಮೊದಲಾದ ದೇಶಗಳು ಬರುತ್ತವೆ.

ಒಂದು ವೇಳೆ ತಾನು ದಾಳಿ ನಡೆಸಿದರೆ, ಕತಾರ್‌ ಮತ್ತು ಮಧ್ಯಪ್ರಾಚ್ಯ ದೇಶದಲ್ಲಿರುವ ಸೇನಾ ನೆಲೆಗಳ ಮೇಲೆ ಇರಾನ್‌ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಊಹಿಸಿರುವ ಅಮೆರಿಕ, ಈ ಪ್ರದೇಶಗಳಲ್ಲಿನ ಕೆಲ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ಜಾಗ ತೆರವು ಮಾಡುವಂತೆ ಈಗಾಗಲೇ ಸೂಚಿಸಿದೆ. ಅದರ ಬೆನ್ನಲ್ಲೇ ನೌಕಾಪಡೆಯ ಮುಂಚೂಣಿ ದಾಳಿ ನೌಕೆಗಳನ್ನು ಇರಾನ್‌ನತ್ತ ರವಾನಿಸಲು ಆರಂಭಿಸಿದೆ.