ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನ : 1.5 ಲಕ್ಷ ಸರ್ಕಾರಿ ಹುದ್ದೆ ಕಡಿತ

KannadaprabhaNewsNetwork |  
Published : Sep 30, 2024, 01:15 AM ISTUpdated : Sep 30, 2024, 04:27 AM IST
ಪಾಕ್‌ | Kannada Prabha

ಸಾರಾಂಶ

ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನವು ಆಳಿತಾತ್ಮಕ ವೆಚ್ಚ ಕಡಿತದ ಕ್ರಮ ಕೈಗೊಂಡಿದ್ದು, ಸುಮಾರು 1.5 ಲಕ್ಷ ಸರ್ಕಾರಿ ಹುದ್ದೆ ಕಡಿತ ಮಾಡಲು ಹಾಗೂ 6 ಸಚಿವಾಲಯಗಳನ್ನು ಮುಚ್ಚಿ ಇನ್ನೆರಡನ್ನು ವಿಲೀನಗೊಳಿಸಲು ತೀರ್ಮಾನಿಸಿದೆ.

 ಇಸ್ಲಾಮಾಬಾದ್‌ : ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನವು ಆಳಿತಾತ್ಮಕ ವೆಚ್ಚ ಕಡಿತದ ಕ್ರಮ ಕೈಗೊಂಡಿದ್ದು, ಸುಮಾರು 1.5 ಲಕ್ಷ ಸರ್ಕಾರಿ ಹುದ್ದೆ ಕಡಿತ ಮಾಡಲು ಹಾಗೂ 6 ಸಚಿವಾಲಯಗಳನ್ನು ಮುಚ್ಚಿ ಇನ್ನೆರಡನ್ನು ವಿಲೀನಗೊಳಿಸಲು ತೀರ್ಮಾನಿಸಿದೆ.

ಪಾಕ್‌ ಅನ್ನು ಆರ್ಥಿಕ ಸಂಕಟದಿಂದ ಪಾರು ಮಾಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಇತ್ತೀಚೆಗೆ 700 ಕೋಟಿ ರು. ಸಾಲ ನೀಡಲು ಒಪ್ಪಿತ್ತು ಹಾಗೂ ಸಾಲ ನೀಡಲು ಕೆಲವು ಷರತ್ತು ವಿಧಿಸಿತ್ತು. ಇದರಲ್ಲಿ ಅನಗತ್ಯ ಆಡಳಿತಾತ್ಮಕ ವೆಚ್ಚ ಕಡಿತವೂ ಸೇರಿತ್ತು. ಇದಕ್ಕೆ ಪಾಕಿಸ್ತಾನ ಒಪ್ಪಿದ ಕಾರಣ ಸೆ.26ರಂದು ಮೊದಲ ಕಂತಿನಲ್ಲಿ 100 ಕೋಟಿ ಡಾಲರ್ ನೀಡಿದೆ.

ಭಾನುವಾರ ಈ ಬಗ್ಗೆ ಮಾತನಾಡಿದ ಪಾಕ್‌ ಹಣಕಾಸು ಸಚಿವ ಮುಹಮ್ಮದ್‌ ಔರಂಗಜೇಬ್‌, ‘ಐಎಂಎಫ್‌ ಜತೆಗಿನ ಒಪ್ಪಂದ ಅಂತಿಮಗೊಳಿಸಲಾಗಿದೆ. ಇದರ ಅಂಗವಾಗಿ 6 ಸಚಿವಾಲಯಗಳನ್ನು ಮಚ್ಚಲಾಗುವುದು ಹಾಗೂ 2 ಸಚಿವಾಲಯಗಳನ್ನು ವಿಲೀನಗೊಳಿಸಲಾಗುವುದು. ಜತೆಗೆ ವಿವಿಧ ಸಚಿವಾಲಯಗಳಲ್ಲಿ 1,50,000 ಹುದ್ದೆಗಳನ್ನು ತೆಗೆದುಹಾಕಲಾಗುವುದು’ ಎಂದರು.ಇದಲ್ಲದೆ ಸಬ್ಸಿಡಿ ಕಡಿತ, ಕೃಷಿ ಹಾಗೂ ರಿಯಲ್‌ ಎಸ್ಟೇಟ್‌ ಮೇಲೆ ತೆರಿಗೆ ಹೇರಿಕೆ- ಮುಂತಾದ ಕ್ರಮವನ್ನೂ ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ. ಕಳೆದ ವರ್ಷ 3 ಲಕ್ಷ ಹಾಗೂ ಈ ವರ್ಷ 7.32 ಲಕ್ಷ ಹೊಸ ತೆರಿಗೆದಾರರನ್ನು ನೋಂದಾಯಿಸಿಸಲಾಗಿದೆ. ವಾಹನ ಹಾಗೂ ಆಸ್ತಿ ಖರೀದಿ ಮಾಡಲು ತೆರಿಗೆ ಪಾವತಿ ಕಡ್ಡಾಯಗೊಳಿಸಲಾಗಿದೆ ಎಂದರು.

ಭಾರೀ ಸಾಲದ ಹೊರೆ:

ಪಾಕಿಸ್ತಾನ ಈಗಾಗಲೇ ಭಾರೀ ಬಾಹ್ಯ ಸಾಲ ಹೊಂದಿದೆ. ಈ ಪೈಕಿ ಮುಂದಿನ 4 ವರ್ಷಗಳಲ್ಲಿ 24 ಲಕ್ಷ ಕೋಟಿ ರು. (ಪಾಕಿಸ್ತಾನ ರುಪಾಯಿ) ಸಾಲ ಮರುಪಾವತಿ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಐಎಂಎಫ್‌ ಒಡ್ಡಿದ ಸಾಲಗಳನ್ನು ಮರುಮಾತಿಲ್ಲದೇ ಒಪ್ಪಬೇಕಾದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಇದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕಸಾಪ ಸಿಬ್ಬಂದಿಗಿಲ್ಲ 3 ತಿಂಗಳ ವೇತನ
ವೆನಿಜುವೆಲಾ ಹಂಗಾಮಿ ಅಧ್ಯಕ್ಷೆಯಾಗಿ ಡೆಲ್ಸಿ ಶಪಥ