;Resize=(412,232))
ದುಬೈ: ಇರಿತದ ಹೊರತಾಗಿಯೂ ಜೀವದ ಹಂಗು ತೊರೆದು 180 ಜನರ ಪ್ರಾಣ ಉಳಿಸಿದ ಭಾರತದ ಪೈಟಲ್ ಸ್ಮಿತ್ ಮಚ್ಛರ್ ಅವರನ್ನು ದುಬೈ ರಾಜಕುಮಾರ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲಿ ಮಕ್ತೌಮ್ ಅವರು ಶನಿವಾರ ಇಲ್ಲಿನ ಆಸ್ಪತ್ರೆಯಲ್ಲಿ ಭೇಟಿಯಾದರು.
ಆಸ್ಪತ್ರೆ ಭೇಟಿ ಬಳಿಕ ಹಮ್ದಾನ್ ಅವರು ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸ್ಮಿತ್ ಧೈರ್ಯ ಕೊಂಡಾಡಿದ್ದಾರೆ. ‘ ಭಾರತೀಯ ಧೈರ್ಯಶಾಲಿ ಕ್ಯಾಪ್ಟನ್ ಸ್ಮಿತ್ ವೈದ್ಯಕೀಯ ಆರೈಕೆಯಲ್ಲಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ. ನಾವು ಅವರ ಕುಟುಂಬ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ.
ಅವರ ತ್ವರಿತ ಚೇತರಿಕೆ ಬೆಂಬಲಿಸುತ್ತೇವೆ. ಅವರು ನಮ್ಮ ತಂಡದ ಭಾಗವಾಗಿದ್ದಾರೆ ಎಂಬುದು ನಮಗೆ ಹೆಮ್ಮೆ’ ಎಂದಿದ್ದಾರೆ.