ಪತ್ನಿ ಹಂತಕ ಭಾರತೀಯನ ಸುಳಿವು ನೀಡಿದ 2 ಕೋಟಿ ರು. ಇನಾಮು

KannadaprabhaNewsNetwork |  
Published : Apr 14, 2024, 01:50 AM ISTUpdated : Apr 14, 2024, 05:03 AM IST
Murder

ಸಾರಾಂಶ

ಪತ್ನಿಯನ್ನು ಕೊಂದಿದ್ದ ಭಾರತೀಯ ಮೂಲದ ವ್ಯಕ್ತಿಯ ಸುಳಿವು ನೀಡಿದವರಿಗೆ ಫೆಡರಲ್ ಬ್ಯೂರೋ ಆಪ್ ಇನ್‌ವೆಸ್ಟಿಗೇಷನ್ ಸಂಸ್ಥೆಯು 2.1 ಕೋಟಿ ರು ಬಹುಮಾನ ನೀಡುವುದಾಗಿ ಘೋಷಿಸಿದೆ.

ವಾಷಿಂಗ್ಟನ್: ಪತ್ನಿಯನ್ನು ಕೊಂದಿದ್ದ ಭಾರತೀಯ ಮೂಲದ ವ್ಯಕ್ತಿಯ ಸುಳಿವು ನೀಡಿದವರಿಗೆ ಫೆಡರಲ್ ಬ್ಯೂರೋ ಆಪ್ ಇನ್‌ವೆಸ್ಟಿಗೇಷನ್ ಸಂಸ್ಥೆಯು 2.1 ಕೋಟಿ ರು ಬಹುಮಾನ ನೀಡುವುದಾಗಿ ಘೋಷಿಸಿದೆ.

ಭಾರತ ಮೂಲದ ಭದ್ರೇಶ್ ಕುಮಾರ್ ಚೇತನ್ ಭಾಯ್ ಪಟೇಲ್ ಎನ್ನುವ ವ್ಯಕ್ತಿ ಅಮೆರಿಕದ ಮೇರಿಲ್ಯಾಂಡ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಡುತ್ತಿದ್ದ. ಏಪ್ರಿಲ್ 12, 2015 ರಲ್ಲಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದ.

ಆ ಬಳಿಕ ಪರಾರಿಯಾಗಿದ್ದ.ಘಟನೆ ನಡೆದ ಬಳಿಕ ಆರೋಪಿಯನ್ನು ಬಂಧಿಸುವುದಕ್ಕೆ ಬಂಧನ ವಾರಂಟ್ ಜಾರಿಗೊಳಿಸಲಾಗಿತ್ತು. ಆದ್ರೆ ಭದ್ರೇಶ್ ಕುಮಾರ್ ಮಾತ್ರ ಪೊಲೀಸರಿಗೆ ಸಿಕ್ಕಿರಲಿಲ್ಲ. ಭದ್ರೇಶ್ ಹೆಸರನ್ನು ಎಫ್‌ಬಿಐ ಮೋಸ್ಟ್ ವಾಂಟೆಡ್ ಲಿಸ್ಟ್‌ ನ ಅಗ್ರ 10 ಪಟ್ಟಿಯಲ್ಲಿ ಸೇರಿಸಿದ್ದು, ಆತನ ಬಗ್ಗೆ ಸುಳಿವು ನೀಡಿದರೆ 2.5 ಲಕ್ಷ ಡಾಲರ್ ಹಣ ಬಹುಮಾನ ರೂಪದಲ್ಲಿ ನೀಡುವುದಾಗಿ ಘೋಷಿಸಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಮೈಕ್‌ ಮೂಲಕ ಆಜಾನ್‌ ಕರೆ ನಿಷೇಧಕ್ಕೆ ಡೆನ್ಮಾಕ್‌ ಚಿಂತನೆ
1985ರ ಏರ್‌ ಇಂಡಿಯಾ ಸ್ಫೋಟಕ್ಕೆ ಖಲಿಸ್ತಾನಿಗಳು ಕಾರಣ: ಕೆನಡಾ ಒಪ್ಪಿಗೆ