ರಷ್ಯಾದ ಆಗಸದಲ್ಲಿ ಒಮ್ಮೆಲೆ 4 ಚಂದ್ರನ ದರ್ಶನ!

Published : Feb 06, 2026, 08:26 AM IST
4 Moon in Russia

ಸಾರಾಂಶ

ಚಂದ್ರನಿರುವ ಹಾಗೂ ಇಲ್ಲದ ರಾತ್ರಿಗಳು ಸಾಮಾನ್ಯ. ಆದರೆ ರಷ್ಯಾದಲ್ಲಿ ಒಮ್ಮೆಲೆ 4 ಚಂದ್ರಗಳು ಕಾಣಿಸಿಕೊಂಡ ಘಟನೆಯೊಂದು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ. ಇದೇನಿದು ಆಗಸದಲ್ಲಿ ಹೊಸ ಕೌತುಕ ಎಂದು ಒಮ್ಮೆಲೆ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಪಟ್ಟಿದ್ದಾರೆ.

 ಮಾಸ್ಕೋ: ಚಂದ್ರನಿರುವ ಹಾಗೂ ಇಲ್ಲದ ರಾತ್ರಿಗಳು ಸಾಮಾನ್ಯ. ಆದರೆ ರಷ್ಯಾದಲ್ಲಿ ಒಮ್ಮೆಲೆ 4 ಚಂದ್ರಗಳು ಕಾಣಿಸಿಕೊಂಡ ಘಟನೆಯೊಂದು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ. ಇದೇನಿದು ಆಗಸದಲ್ಲಿ ಹೊಸ ಕೌತುಕ ಎಂದು ಒಮ್ಮೆಲೆ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಪಟ್ಟಿದ್ದಾರೆ. ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಕಂಡುಬಂದ ಈ ಅಪರೂಪದ ಘಟನೆಯ ಈ ದೃಶ್ಯ ಭಾರೀ ವೈರಲ್‌ ಆಗುತ್ತಿದೆ.

ಇದರ ಹಿಂದೆ ‘ಪ್ಯಾರಾಸೆಲೀನ್’ ಎಂಬ ನೈಸರ್ಗಿಕ ಪ್ರಕ್ರಿಯೆ

ಇದರ ಹಿನ್ನೆಲೆ ಹುಡುಕಿದಾಗ ಇದರ ಹಿಂದೆ ‘ಪ್ಯಾರಾಸೆಲೀನ್’ ಎಂಬ ನೈಸರ್ಗಿಕ ಪ್ರಕ್ರಿಯೆಯ ಕೈಚಳಕ ಕಂಡುಬಂದಿದೆ. ಅಂದರೆ ಇಲ್ಲಿ ಒಬ್ಬನೇ ಚಂದ್ರ ನಾಲ್ಕು ಚಂದ್ರನಾಗಿ ಗೋಚರಿಸುತ್ತಾನೆ. ಇದಕ್ಕೆ ನೆರವು ನೀಡುವುದು ವಾತಾವರಣ.

ಒಂದು ಚಂದ್ರ ನಾಲ್ಕಾಗುವುದು ಹೇಗೆ?

ಪ್ಯಾರಾಸೆಲೀನ್ ಎಂಬುದು ಸಾಮಾನ್ಯವಾಗಿ ಚಳಿಗಾಲದಲ್ಲಿ ಸಂಭವಿಸುವ ಪ್ರಕ್ರಿಯೆ. ರಷ್ಯಾ ದೇಶದಲ್ಲಿ ಪ್ರಸ್ತುತ ವಿಪರೀತ ಚಳಿಯಿದ್ದು, ವಾತಾವರಣದ ಗಾಳಿಯಲ್ಲಿರುವ ನೀರಿನ ಅಂಶವೂ ಮರಗಟ್ಟಿ ಮಂಜುಗಡ್ಡೆಯಾಗಿರುತ್ತವೆ. ಇವು ಅತ್ಯಂತ ತೆಳುಪದರದಲ್ಲಿ ಇರುವ ಕಾರಣ ಬರಿಗಣ್ಣಿಗೆ ಅಷ್ಟು ಸುಲಭವಾಗಿ ಮಂಜುಗಡ್ಡೆಯ ರೂಪದಲ್ಲಿ ಕಾಣುವುದಿಲ್ಲ. ಇಂಥ ವಾತಾವರಣದಲ್ಲಿ ಚಂದ್ರನ ಕಿರಣಗಳು ಹಾದು ಭೂಮಿಯತ್ತ ಸಾಗಿ ಬರುತ್ತೆ.

ಈ ವೇಳೆ ವಾತಾವರಣದಲ್ಲಿನ ಮಂಜುಗಡ್ಡೆ ರೂಪ ಪಡೆದಿರುವ ಗಾಳಿಯ ಕಣಗಳು ಷಡ್ಬುಜಾಕಾರದಲ್ಲಿ ಇರುವ ಕಾರಣ, ತಮ್ಮ ಮೂಲಕ ಹಾಯುವ ಬೆಳಕಿನ ಕಿರಣವನ್ನು ತಮ್ಮ ಕೋನಗಳಿಗೆ ಅನುಗುಣವಾಗಿ ಬಗ್ಗಿಸುತ್ತವೆ. ಇದರಿಂದ ಚಂದ್ರನ ಹತ್ತಿರದಲ್ಲಿ, ಅಷ್ಟೇ ಎತ್ತರದಲ್ಲಿ ಚಂದ್ರನಂತೆಯೇ ಹೊಳೆಯುವ ಬಿಂದುವಿನಂತಹ ರಚನೆ ಸೃಷ್ಟಿಯಾಗುತ್ತದೆ. ಪರಿಣಾಮ ವಿಶ್ವದ ಕೆಲವೊಂದು ಭಾಗಗಳಲ್ಲಿ ಮೂಲ ಚಂದ್ರನ ಜೊತೆಗೆ ಮತ್ತಷ್ಟು ಚಂದ್ರನ ದರ್ಶನ ಆಗುತ್ತದೆ.

ಇಂಥ ಅಪರೂಪದ ಪ್ರಕ್ರಿಯೆ ವೇಳೆ ಸಾಮಾನ್ಯವಾಗಿ ಹೀಗೆ 2 ಚಂದ್ರಗಳು ಕಾಣಿಸುತ್ತವೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚಿನ ಚಂದ್ರನ ಸೃಷ್ಟಿಯೂ ಆಗುತ್ತದೆ. ಇದೀಗ ರಷ್ಯಾದಲ್ಲಿ ಆಗಿದ್ದೂ ಇಂಥದ್ದೇ ಬೆಳವಣಿಗೆ.

ಕೆಲ ದಿನಗಳ ಹಿಂದೆ ಇದೇ ಕಾರಣದಿಂದ ಮುಂಜಾನೆ ರಷ್ಯನ್ನರಿಗೆ 2 ಸೂರ್ಯಗಳ ದರ್ಶನವಾಗಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ರಷ್ಯಾ-ಅಮೆರಿಕ ಕೊನೆಯ ಅಣು ಒಪ್ಪಂದ ಅಂತ್ಯ : ಆತಂಕ
ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು