ನಾನು ಸಾವಿಗೆ ಅಂಜಲ್ಲ: ಫ್ಲೈ ದುಬೈ ‘ಉಗ್ರ’ ಪೈಲಟ್

Published : Oct 05, 2026, 08:48 AM IST
flydubai

ಸಾರಾಂಶ

‘ಇಸ್ರೇಲ್‌ಗೆ ಹೋಗುತ್ತಿದ್ದ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನ ಮಾಡಲು ಪ್ರಯತ್ನಿಸಿದ್ದೆ, ನಾನು ಸಾವಿಗೆ ಅಂಜುವುದಿಲ್ಲ’ ಎಂದು ಫ್ಲೈದುಬೈನ ಒಮಾನಿ ಪೈಲೆಟ್‌ ಹಮಾಮ್‌ ಅಲ್‌ ಹಮಾಮಿ ಸೌದಿ ಅರೇಬಿಯಾ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ‘ವಾಲ್‌ ಸ್ಟ್ರೀಟ್‌ ಜರ್ನಲ್’ ವರದಿ ಮಾಡಿದೆ.

ರಿಯಾದ್‌: ‘ಇಸ್ರೇಲ್‌ಗೆ ಹೋಗುತ್ತಿದ್ದ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನ ಮಾಡಲು ಪ್ರಯತ್ನಿಸಿದ್ದೆ, ನಾನು ಸಾವಿಗೆ ಅಂಜುವುದಿಲ್ಲ’ ಎಂದು ಫ್ಲೈದುಬೈನ ಒಮಾನಿ ಪೈಲೆಟ್‌ ಹಮಾಮ್‌ ಅಲ್‌ ಹಮಾಮಿ ಸೌದಿ ಅರೇಬಿಯಾ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ‘ವಾಲ್‌ ಸ್ಟ್ರೀಟ್‌ ಜರ್ನಲ್’ ವರದಿ ಮಾಡಿದೆ.

ಸುರಕ್ಷಿತವಾಗಿ ಇಳಿದ ಬಳಿಕ ಆರೋಪಿ ಹಮಾಮಿಯನ್ನು ವಶಕ್ಕೆ

ಪ್ರಯಾಣಿಕರ ನೆರವಿನಿಂದ ವಿಮಾನವು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಆರೋಪಿ ಹಮಾಮಿಯನ್ನು ವಶಕ್ಕೆ ಪಡೆದಿದ್ದ ಸೌದಿ ಅರೇಬಿಯಾದ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಆಗ ವಿಮಾನವನ್ನು ಪತನಗೊಳಿಸುವ ತನ್ನ ಉದ್ದೇಶ ಬಹಿರಂಗಪಡಿಸಿದ್ದಾನೆ ಎಂದು ವರದಿ ಹೇಳಿದೆ.

ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ

ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಪೈಲಟ್‌ ಆಗಿದ್ದ ಹಮಾಮಿ ಭಾರತೀಯ ಮೂಲದ ಸಹ ಪೈಲಟ್‌ ಸ್ಮಿತ್‌ ಮಚ್ಚಾನಿ ಮೇಲೆ ಕಿರು ಕೊಡಲಿಯಿಂದ ಹಲ್ಲೆ ನಡೆಸಿದ್ದ. ನಂತರ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಉದ್ದೇಶಿಸಿದ್ದ. ಆದರೆ, ಗಂಭೀರ ಗಾಯಗೊಂಡ ಸ್ಥಿತಿಯಲ್ಲೂ ಸ್ಮಿತ್‌ ತೋರಿದ ಪ್ರತಿರೋಧ ಹಾಗೂ ಪ್ರಯಾಣಿಕರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಭಾರೀ ದುಷ್ಕೃತ್ಯವೊಂದು ತಪ್ಪಿತ್ತು ಹಾಗೂ ವಿಮಾನದಲ್ಲಿದ್ದ 180 ಮಂದಿ ಜೀವ ಉಳಿದಿದೆ. ಈ ಕುರಿತ ತನಿಖೆ ಮುಂದುವರಿದಿದೆ.

ವರದಿಗಳ ಪ್ರಕಾರ ಬಂಧಿತ ಹಮಾಮಿ ಪೈಲಟ್‌ ಆಗುವ ಕುರಿತು ತೀವ್ರ ಹುಚ್ಚು ಇತ್ತು. 2022ರಲ್ಲಿ ಆತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದ. ಏಕಾಂಗಿಯಾಗಿ ಮೊದಲ ಬಾರಿ ವಿಮಾನ ಹಾರಿಸಿದ ಹಾಗೂ ಪ್ರಯಾಣಿಕರಿದ್ದ ವಿಮಾನವನ್ನು ಮೊದಲ ಬಾರಿ ಲ್ಯಾಂಡ್‌ ಮಾಡುವ ಅನುಭವವನ್ನು ಆತ ಮರೆಯಲಾಗದ ಅನುಭವ ಎಂದು ಬರೆದುಕೊಂಡಿದ್ದ. ಪೈಲಟ್‌ ಆಗುವ ಕುರಿತು ತೀವ್ರ ಆಸಕ್ತಿ ಹೊಂದಿದ್ದರೂ ಆತ ಹೇಗೆ ಮೂಲಭೂತವಾದದತ್ತ ತಿರುಗಿದ ಎಂಬ ಕುರಿತು ಇದೀಗ ಕುತೂಹಲ ಮೂಡಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಫ್ಲೈದುಬೈ ವಿಮಾನದ ಕಾಕ್‌ಪಿಟ್‌ ಟೆರರ್‌ ಕತೆ ಬಿಚ್ಚಿಟ್ಟ ಹೀರೋ ಪೈಲಟ್‌
ಶಿಕ್ಷಕ ಬದಲಾಗಬೇಕೇ? ಶಿಕ್ಷಣ ವ್ಯವಸ್ಥೆಯೇ ಬದಲಾಗಬೇಕೇ?