ಮುನೀರ್‌ಗೆ ಪಾಕ್‌ ಅಣ್ವಸ್ತ್ರದ ಕೀಲಿ ಕೈ!

KannadaprabhaNewsNetwork |  
Published : Nov 10, 2025, 01:15 AM ISTUpdated : Nov 10, 2025, 04:43 AM IST
Asim Munir

ಸಾರಾಂಶ

ಇತ್ತೀಚೆಗೆ ಭಾರತದ ನಡೆಸಿದ ಆಪರೇಷನ್‌ ಸಿಂದೂರದ ವೇಳೆ ಮಣ್ಣುಮುಕ್ಕಿದರೂ, ಸಮರದಲ್ಲಿ ಪಾಕ್‌ ಪಡೆಗಳ ನೇತೃತ್ವ ವಹಿಸಿದ್ದ ತನ್ನ ಸೇನಾ ಮುಖ್ಯಸ್ಥ ಜ। ಆಸಿಂ ಮುನೀರ್‌ ಕೈಗೆ ದೇಶದ ಅಣ್ವಸ್ತ್ರಗಳ ಕೀಲಿ ಕೈಯನ್ನು ಕೊಡುವುದು ಸೇರಿದಂತೆ ಸಕಲ ‘ಸೇನಾ ಸರ್ವಾಧಿಕಾರ’ ನೀಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

 ಇಸ್ಲಾಮಾಬಾದ್‌: ಇತ್ತೀಚೆಗೆ ಭಾರತದ ನಡೆಸಿದ ಆಪರೇಷನ್‌ ಸಿಂದೂರದ ವೇಳೆ ಮಣ್ಣುಮುಕ್ಕಿದರೂ, ಸಮರದಲ್ಲಿ ಪಾಕ್‌ ಪಡೆಗಳ ನೇತೃತ್ವ ವಹಿಸಿದ್ದ ತನ್ನ ಸೇನಾ ಮುಖ್ಯಸ್ಥ ಜ। ಆಸಿಂ ಮುನೀರ್‌ ಕೈಗೆ ದೇಶದ ಅಣ್ವಸ್ತ್ರಗಳ ಕೀಲಿ ಕೈಯನ್ನು ಕೊಡುವುದು ಸೇರಿದಂತೆ ಸಕಲ ‘ಸೇನಾ ಸರ್ವಾಧಿಕಾರ’ ನೀಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಈ ಕುರಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಅದು ಸೋಮವಾರ ಮತದಾನಕ್ಕೆ ಒಳಪಡಲಿದೆ.

ಆದರೆ ಸೇನಾ ಮುಖ್ಯಸ್ಥರಿಗೆ ಹೀಗೆ ಸರ್ವಾಧಿಕಾರ ನೀಡುವ ಪ್ರಧಾನಿ ಶೆಹಬಾಜ್ ಷರೀಫ್‌ ನೇತೃತ್ವದ ಸರ್ಕಾರದ ಕ್ರಮವನ್ನು ವಿಪಕ್ಷಗಳು ಕಟುವಾಗಿ ಟೀಕಿಸಿದ್ದು, ಇದರ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸಿವೆ.

ಏನೇನು ಅಧಿಕಾರ?:

ಇತ್ತೀಚೆಗೆ ಮುನೀರ್‌ಗೆ ಪಾಕ್‌ ಸರ್ಕಾರ ಫೀಲ್ಡ್ ಮಾರ್ಷಲ್‌ ಹುದ್ದೆ ನೀಡಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಸಂವಿಧಾನಕ್ಕೆ ತಿದ್ದುಪಡಿ ಮೂಲಕ ಸಶಸ್ತ್ರ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಹುದ್ದೆ ಸೃಷ್ಟಿಸಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಮೂರೂ ಪಡೆಗಳ ನಿಯಂತ್ರಣ ಸಿಡಿಎಸ್‌ ಕೈಗೆ ಒಳಪಡಲಿದೆ. ಜೊತೆಗೆ ಪಾಕಿಸ್ತಾನದ ಪರಮಾಣು ಮತ್ತು ಶಸ್ತ್ರಾಗಾರದ ಕೀಲಿಕೈ ಕೂಡ ಅವರಿಗೇ ಸಿಗುತ್ತದೆ.

ಇದಲ್ಲದೆ, ಅಧಿಕಾರದ ಅವಧಿ ಮುಗಿಯುವವರೆಗೂ ನ್ಯಾಯಾಂಗ ಅಥವಾ ಕಾರ್ಯಾಂಗಕ್ಕೆ ಸಿಡಿಎಸ್‌ ಪದಚ್ಯುತಿ ಅಧಿಕಾರ ನಿರಾಕರಿಸುವ, ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥರ ನೇಮಕದ ಅಧಿಕಾರ ನೀಡುವ ಅಂಶಗಳು ಕೂಡಾ ಮಸೂದೆಯಲ್ಲಿ ಇದೆ.

ಹೆಚ್ಚಿನ ಅಧಿಕಾರ ಏಕೆ?:

ಆಪರೇಷನ್‌ ಸಿಂದೂರದಲ್ಲಿ ಸೋಲಿಗೆ ಸೇನೆ, ಸರ್ಕಾರ, ಗುಪ್ತಚರ ಸಂಸ್ಥೆಗಳ ನಡುವಿನ ಸಮನ್ವಯದ ಕಾರಣ ನೀಡಿ, ಆಸಿಂ ಮುನೀರ್‌ ಈ ಎಲ್ಲಾ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

PREV
Read more Articles on

Recommended Stories

ಬೊಜ್ಜು, ಕ್ಯಾನ್ಸರ್‌ಪೀಡಿತರಿಗೆ ಇನ್ನು ಅಮೆರಿಕ ವೀಸಾ ಕಷ್ಟ!
ಪಾಕ್‌ ಆಕ್ರಮಿತ ಕಾಶ್ಮೀರದಲ್ಲೂಈಗ ಜೆನ್‌ಜೀಗಳ ಪ್ರತಿಭಟನೆ