ಹೊಗೆಮಂಜು: ಪೂರ್ವ ಪಾಕ್‌ನಲ್ಲಿಸಾವಿರಾರು ಜನರಿಗೆ ಅನಾರೋಗ್ಯ

KannadaprabhaNewsNetwork | Published : Nov 10, 2023 1:01 AM

ಸಾರಾಂಶ

ಲಾಹೋರ್‌: ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಲಾಹೋರ್‌ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಮಂಜು ಆವರಿಸಿದ್ದು, ಸಾವಿರಾರು ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಲಾಹೋರ್‌: ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಲಾಹೋರ್‌ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಮಂಜು ಆವರಿಸಿದ್ದು, ಸಾವಿರಾರು ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಇದರಿಂದಾಗಿ ಶಾಲೆಗಳಿಗೆ ರಜೆ ನೀಡಲಾಗಿದ್ದು, ಮಾರುಕಟ್ಟೆಗಳು ಮತ್ತು ಉದ್ಯಾನವನಗಳನ್ನು 4 ದಿನಗಳ ಕಾಲ ಮುಚ್ಚಲಾಗಿದೆ. ಲಾಹೋರ್‌ ವಿಶ್ವದ ಅತಿ ಮಲಿನ ನಗರ ಸ್ಥಾನ ಪಡೆದುಕೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಾವಿರಾರು ಜನರು ಕೆಮ್ಮು ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಇದರಿಂದ ರಕ್ಷಣೆ ಪಡೆದುಕೊಳ್ಳಲು ಮಾಸ್ಕ್‌ ಧರಿಸುವುದು ಮತ್ತು ಮನೆಯಲ್ಲೇ ಇರುವುದು ಮಾತ್ರ ನೆರವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಕೃಷಿ ತಾಜ್ಯವನ್ನು ಸುಡುವ ಪ್ರಮಾಣ ಅಧಿಕವಾಗಿರುವುದು ಈ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

Share this article