;Resize=(412,232))
ನವದೆಹಲಿ: ಉಕ್ರೇನ್‌ನಲ್ಲಿರುವ ಭಾರತೀಯ ಮೂಲದ ಔಷಧ ಕಂಪನಿಯಾದ ಕುಸುಮ್ ಗ್ರೂಪ್‌ನ ಫಾರ್ಮಾ ಘಟಕದ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಒಬ್ಬ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡಿದ್ದಾರೆ.
ಉಕ್ರೇನ್‌ನ ಸುಮಿ ನಗರದಲ್ಲಿರುವ ಫಾರ್ಮಾ ಘಟಕದ ಮುಖ್ಯ ರಚನೆಯು ಡ್ರೋನ್ ದಾಳಿಯಿಂದ ಸಂಪೂರ್ಣ ನಾಶವಾಗಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಷ್ಯಾ ದಾಳಿಯಿಂದ ಕಂಪನಿಗೆ 400 ಕೋಟಿ ರು. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ರಷ್ಯಾದ ಈ ದಾಳಿಯನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ.
ಕುಸುಮ್ ಗ್ರೂಪ್ ಭಾರತೀಯ ಮೂಲದ ರಾಜೀವ್ ಗುಪ್ತಾ ನೇತೃತ್ವದ ಕಂಪನಿಯಾಗಿದ್ದು, ಭಾರತ, ಉಕ್ರೇನ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಉತ್ಪನ್ನ ಮಾರಾಟ ಮಾಡುತ್ತಿದೆ. ಹೆಚ್ಚಾಗಿ ಜನರಿಕ್ ಔಷಧಿಗಳನ್ನು ಈ ಕಂಪನಿ ತಯಾರಿಸುತ್ತದೆ. ಉಕ್ರೇನ್, ಉಜ್ಬೇಕಿಸ್ತಾನ ಮತ್ತಿತರ ದೇಶಗಳಲ್ಲಿ ಹೆಚ್ಚಿನ ವ್ಯವಹಾರ ನಡೆಸುತ್ತದೆ. 1994ರಲ್ಲಿ ಭಾರತೀಯ ಔಷಧಗಳನ್ನು ಉಕ್ರೇನ್‌ನಲ್ಲಿ ಹಂಚಿಕೆ ಮಾಡುವ ಕಾರ್ಯ ಆರಂಭಿಸಿದ್ದ 2009ರಲ್ಲಿ ಉಕ್ರೇನ್‌ನಲ್ಲಿ ತನ್ನದೇ ಆದ ಉತ್ಪಾದನಾ ಘಟಕವನ್ನು ಶುರು ಮಾಡಿತ್ತು. ಭಾರತದ ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಈ ಕಂಪನಿ ತನ್ನ ಘಟಕಗಳನ್ನು ಹೊಂದಿದೆ.