ವೈರಲ್‌ ಚೆಕ್‌! (ಮೈದಾನದಲ್ಲಿ ಬೊಂಬೆ ಎಸೆದು ಪ್ಯಾಲೆಸ್ತೀನ್‌ಗೆ ಬೆಂಬಲ!)

KannadaprabhaNewsNetwork |  
Published : Oct 27, 2023, 12:30 AM ISTUpdated : Oct 30, 2023, 10:33 AM IST
ವೈರಲ್‌ ಚೆಕ್‌ | Kannada Prabha

ಸಾರಾಂಶ

ಇಸ್ರೇಲ್‌ ಹಮಾಸ್‌ ನಡುವೆ ಯುದ್ಧ ಆರಂಭವಾದ ಮೇಲೆ ಫುಟ್ಬಾಲ್‌ ಪಂದ್ಯದಲ್ಲಿ ಬೊಂಬೆಗಳನ್ನು ಎಸೆದು ಅಭಿಮಾನಿಗಳು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇಸ್ರೇಲ್‌ ಹಮಾಸ್‌ ನಡುವೆ ಯುದ್ಧ ಆರಂಭವಾದ ಮೇಲೆ ಫುಟ್ಬಾಲ್‌ ಪಂದ್ಯದಲ್ಲಿ ಬೊಂಬೆಗಳನ್ನು ಎಸೆದು ಅಭಿಮಾನಿಗಳು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಅಭಿಮಾನಿಗಳು ಫುಟ್ಬಾಲ್‌ ಪಂದ್ಯದಲ್ಲಿ ಗ್ಯಾಲರಿಯಿಂದ ಮೈದಾನದ ಕಡೆ ತರಹೇವಾರಿ ಬೊಂಬೆಗಳನ್ನು ಎಸೆದು ತಮ್ಮ ಬೆಂಬಲವನ್ನು ಪ್ಯಾಲೆಸ್ತೀನ್‌ಗೆ ನೀಡಿದ್ದಾರೆ ಎಂದು ಬರೆಯಲಾಗಿದೆ. ಅದರಲ್ಲಿ ‘ಫುಟ್ಬಾಲ್‌ ಮೈದಾನ ಪ್ಯಾಲೆಸ್ತೀನಿಯರಿಗೆ ರಣಾಂಗಣವಾಗಿದೆ. ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ನಿಂತ ಎಲ್ಲ ಅಭಿಮಾನಿಗಳಿಗೂ ಧನ್ಯವಾದಗಳು ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ಈ ವಿಡಿಯೋವಿನ ಅಸಲಿಯತ್ತನ್ನು ಪರೀಕ್ಷಿಸಲು ರಿವರ್ಸ್‌ ಇಮೇಜಿಂಗ್‌ ಹಾಗೂ ಕೀವರ್ಡ್‌ ಬಳಸಿ ಹುಡುಕಿದಾಗ, ಈ ವಿಡಿಯೋ ಫೆಬ್ರವರಿಯಲ್ಲಿ ನಡೆದ ಘಟನೆಯದ್ದು ಎಂದು ತಿಳಿದುಬಂದಿದೆ. ಟರ್ಕಿ ಭೂಕಂಪಕ್ಕೆ ಪರಿಹಾರವಾಗಿ ಅಲ್ಲಿನ ಆಟಿಕೆ ಮಳಿಗೆ ಇಂಥ ಅಭಿಯಾನ ನಡೆಸಿತ್ತು. ಫುಟ್ಬಾಲ್‌ ಪಂದ್ಯ ಆರಂಭಕ್ಕೂ ಐದು ನಿಮಿಷ ಮುನ್ನ ಬೊಂಬೆಗಳನ್ನು ಮೈದಾನದಲ್ಲಿ ಎಸೆದು ಸಂತಾಪ ಸೂಚಿಸಲಾಗಿತ್ತು. ಅಂದು ಬೊಂಬೆ ಮಾರಾಟದಿಂದ ಬಂದ ಹಣವನ್ನು ಪರಿಹಾರಕ್ಕೆ ನೀಡಲು ಅಂಗಡಿ ನಿರ್ಧರಿಸಿತ್ತು. ಈ ಅಭಿಯನವನ್ನು ಗಾರ್ಡಿಯನ್‌ ಸೇರಿದಂತೆ ಹಲವು ಮಾಧ್ಯಮಗಳ ತಮ್ಮ ಯೂಟ್ಯೂಬ್‌ ವಾಹಿನಿಯಲ್ಲಿ ಹಂಚಿಕೊಂಡಿತ್ತು. ಹಾಗಾಗಿ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಲು ಬೊಂಬೆ ಎಸೆಯಲಾಗಿದೆ ಎಂದು ವಿಡಿಯೋ ಸಂಪೂರ್ಣ ಸುಳ್ಳು ಎಂದು ಖಾತ್ರಿಯಾಗಿದೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!