ಸಸ್ಪೆನ್ಸ್ ಅಂತ್ಯ: ನಾಳೆ ಕ್ಸಿ ಭಾರತಕ್ಕೆ

Published : Sep 11, 2026, 12:03 PM IST
Xi Jinping India Visit China President to Visit India After 7 Years for BRICS Summit Modi Meeting in Focus

ಸಾರಾಂಶ

ಶನಿವಾರದಿಂದ ದೆಹಲಿಯಲ್ಲಿ ಆರಂಭವಾಗಲಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾಗವಹಿಸುತ್ತಾರೋ ಇಲ್ಲವೋ ಎಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ. ಶನಿವಾರ ಕ್ಸಿ ಅವರು ದೆಹಲಿಗೆ ಆಗಮಿಸಲಿದ್ದಾರೆ.

ನವದೆಹಲಿ: ಶನಿವಾರದಿಂದ ದೆಹಲಿಯಲ್ಲಿ ಆರಂಭವಾಗಲಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾಗವಹಿಸುತ್ತಾರೋ ಇಲ್ಲವೋ ಎಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ. ಶನಿವಾರ ಕ್ಸಿ ಅವರು ದೆಹಲಿಗೆ ಆಗಮಿಸಲಿದ್ದಾರೆ.

2020ರ ಗಾಲ್ವಾನ್ ಕಣಿವೆ ಘರ್ಷಣೆಯ ನಂತರದ ಕ್ಸಿ ಭೇಟಿ

ಇದು 2019ರ ಮಹಾಬಲಿಪುರಂ ಭೇಟಿ ಹಾಗೂ 2020ರ ಗಾಲ್ವಾನ್ ಕಣಿವೆ ಘರ್ಷಣೆಯ ನಂತರದ ಕ್ಸಿ ಅವರ ಮೊದಲ ಭಾರತ ಭೇಟಿ ಆಗಲಿದೆ. ಅಲ್ಲದೆ, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಗುರುವಾರ ಬೆಳಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಅವರು ಸುದ್ದಿಗೋಷ್ಠಿಯಲ್ಲಿ ‘ಕ್ಸಿ ಅವರ ಭಾರತ ಭೇಟಿ ಪ್ರಸ್ತುತ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ’ ಎಂದಿದ್ದರು. ಆದರೆ ಗುರುವಾರ ಸಂಜೆ ಕ್ಸಿ ಅವರ ಭೇಟಿ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ‘ಭಾರತ ಗಣರಾಜ್ಯದ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೆ.12 ರಿಂದ 13 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ 18 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಕಳೆದ ವಾರ, ಕ್ಸಿ ಅವರು ದಾಖಲೆಯ 400 ಜನರ ತಂಡದೊಂದಿಗೆ ದಿಲ್ಲಿಗೆ ಬರುವ ನಿರೀಕ್ಷೆ ಇದೆ ಎಂದು ವರದಿಯಾಗಿತ್ತು.

ಬಾಂಗ್ಲಾ ಪ್ರಧಾನಿಗೆ ಆಹ್ವಾನ ಬಂದಿಲ್ಲ:

ಬ್ರಿಕ್ಸ್ ಶೃಂಗಸಭೆಗೆ ತಮ್ಮ ಪ್ರಧಾನಿ ತಾರಿಖ್‌ ರೆಹಮಾನ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯನ್ನು ಬಾಂಗ್ಲಾದೇಶ ಗುರುವಾರ ತಳ್ಳಿಹಾಕಿದೆ, ಬ್ರಿಕ್ಸ್ ಶೃಂಗಸಭೆಗೆ ಅವರನ್ನು ಆಹ್ವಾನಿಸಿಲ್ಲ ಎಂದಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅಮೆರಿಕ ಮೇಲಿನ ಸೆ.11 ದಾಳಿಗೆ 25 ವರ್ಷ
ನಮ್ಮ ಪಕ್ಷ ಗೆದ್ರೆ 5000 ಡಾಲರ್‌ ದುಡ್ಡು: ಈಗ ಟ್ರಂಪ್‌ ಗ್ಯಾರಂಟಿ!