ಟಿಪ್ಪು ರತ್ನ, ಖಡ್ಗ 1 ಕೋಟಿ ರು.ಗೆ ಮಾರಾಟ

KannadaprabhaNewsNetwork |  
Published : Oct 28, 2023, 01:15 AM IST
ಖಡ್ಗ | Kannada Prabha

ಸಾರಾಂಶ

ಲಂಡನ್‌: ಸ್ಥಳೀಯ ಕ್ರಿಸ್ಟೀಸ್‌ ಸಂಸ್ಥೆ ನಡೆಸಿದ ಹರಾಜಿನಲ್ಲಿ ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್‌ಗೆ ಸೇರಿದ್ದ ರತ್ನಗಳು ಮತ್ತು ಸುಂದರವಾದ ಖಡ್ಗವೊಂದು 1 ಕೋಟಿ ರು.ಗೆ ಮಾರಾಟವಾಗಿದೆ.

ನಿರೀಕ್ಷೆಯ 20 ಕೋಟಿ ರು.ಗಿಂತ ಭಾರೀ ಕಡಿಮೆ ಬೆಲೆಗೆ ಮಾರಾಟ ಬ್ರಿಟನ್‌ನಲ್ಲಿ ನಡೆದ ಹರಾಜಿನಲ್ಲಿ ಅನಾಮಿಕ ವ್ಯಕ್ತಿಯಿಂದ ಖರೀದಿ ಲಂಡನ್‌: ಸ್ಥಳೀಯ ಕ್ರಿಸ್ಟೀಸ್‌ ಸಂಸ್ಥೆ ನಡೆಸಿದ ಹರಾಜಿನಲ್ಲಿ ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್‌ಗೆ ಸೇರಿದ್ದ ರತ್ನಗಳು ಮತ್ತು ಸುಂದರವಾದ ಖಡ್ಗವೊಂದು 1 ಕೋಟಿ ರು.ಗೆ ಮಾರಾಟವಾಗಿದೆ. ಈ ಎರಡೂ ವಸ್ತುಗಳು ಸೇರಿ 15ರಿಂದ 20 ಕೋಟಿ ರು.ಗೆ ಮಾರಾಟವಾಗಬಹುದು ಎಂಬ ನಿರೀಕ್ಷೆ ಇತ್ತಾದರೂ, ನಿರೀಕ್ಷೆಗೆ ತಕ್ಕ ದರದಲ್ಲಿ ಎರಡೂ ವಸ್ತುಗಳು ಮಾರಾಟವಾಗಿಲ್ಲ. ಈ ಎರಡೂ ವಸ್ತುಗಳನ್ನು ಖರೀದಿ ಮಾಡಿದವರ ಹೆಸರನ್ನು ಹರಾಜು ಪ್ರಕ್ರಿಯೆ ನಡೆಸಿದ ಕ್ರಿಸ್ಟೀಸ್‌ ಸಂಸ್ಥೆ ಬಹಿರಂಗಪಡಿಸಿಲ್ಲ. ಆಂಗ್ಲೋ- ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನಿಗೆ ಸೋಲಾದ ಬಳಿಕ ಈ ವಸ್ತುಗಳು ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಪಾಲಾಗಿದ್ದವು. ಬಳಿಕ ಇವು ಕ್ರಿಸ್ಟೀನ್‌ ಹರಾಜು ಸಂಸ್ಥೆಯ ಪಾಲಾಗಿದ್ದವು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಖಮೇನಿ ಬೇಟೆಗಾಗಿ ಇರಾನ್‌ನಲ್ಲಿನ ಟ್ರಾಫಿಕ್‌ ಕ್ಯಾಮೆರಾಗಳನ್ನೇ ಹ್ಯಾಕ್‌ ಮಾಡಿತ್ತು ಇಸ್ರೇಲ್‌!
ಯುದ್ಧ ನಿಲ್ಲದಿದ್ರೆ ಭಾರತಕ್ಕೆ ತೈಲ, ಅನಿಲ ಆತಂಕ!