ನಡ್ಡಾ ಪತ್ನಿಯ ಕಳುವಾಗಿದ್ದ ಕಾರು ವಾರಾಣಸಿಯಲ್ಲಿ ಪತ್ತೆ

| Published : Apr 08 2024, 01:05 AM IST / Updated: Apr 08 2024, 05:24 AM IST

ನಡ್ಡಾ ಪತ್ನಿಯ ಕಳುವಾಗಿದ್ದ ಕಾರು ವಾರಾಣಸಿಯಲ್ಲಿ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿಯ ಕಳುವಾಗಿದ್ದ ಕಾರು ಉತ್ತರಪ್ರದೇಶದ ವಾರಾಣಸಿಯಲ್ಲಿ ಪತ್ತೆಯಾಗಿದ್ದು, ಮೂವರು ವಾಹನ ಕಳ್ಳರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿಯ ಕಳುವಾಗಿದ್ದ ಕಾರು ಉತ್ತರಪ್ರದೇಶದ ವಾರಾಣಸಿಯಲ್ಲಿ ಪತ್ತೆಯಾಗಿದ್ದು, ಮೂವರು ವಾಹನ ಕಳ್ಳರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮಾ.19ರಂದು ದಿಲ್ಲಿಯ ಗೋವಿಂದಪುರ ಪ್ರದೇಶದಲ್ಲಿ ಜೆ.ಪಿ. ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಟೊಯೊಟಾ ಫಾರ್ಚುನರ್‌ ಕಾರ್‌ ಕಳುವಾಗಿತ್ತು. ಅಂದು ಸರ್ವಿಸ್‌ ಸೆಂಟರ್‌ನಲ್ಲಿ ಸರ್ವಿಸ್‌ ಮಾಡಿಸಿ ಬಳಿಕ ಕಾರು ಚಾಲಕ ಊಟಕ್ಕೆ ತೆರಳಿದ್ದಾಗ ದುಷ್ಕರ್ಮಿಗಳು ಕಾರನ್ನು ಕಳುವು ಮಾಡಿದ್ದರು. ಈ ಬಗ್ಗೆ ಕಾರು ಚಾಲಕ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರನ್ನು ಪತ್ತೆ ಹಚ್ಚಿ, ಮೂವರು ವಾಹನ ಕಳ್ಳರನ್ನು ಬಂಧಿಸಿದ್ದಾರೆ.

ಕಾರನ್ನು ನಾಗಾಲ್ಯಾಂಡ್‌ಗೆ ತೆಗೆದುಕೊಂಡು ಹೋಗಿ ಮಾರುವ ಉದ್ದೇಶ ಹೊಂದಿದ್ದೇವು ಎಂದು ಕಳ್ಳರು ತಪ್ಪೊಪ್ಪಿಕೊಂಡಿದ್ದಾರೆ.