ಮಹಿಳೆ ಹತ್ಯೆಗೈದು ಆಟೋದಲ್ಲಿ ಶವ ಇಟ್ಟು ಪರಾರಿಯಾದವನಿಗಾಗಿ ಪೊಲೀಸ್ ತಲಾಶ್‌

| N/A | Published : Oct 26 2025, 02:00 AM IST / Updated: Oct 26 2025, 07:44 AM IST

Crime News Bengaluru
ಮಹಿಳೆ ಹತ್ಯೆಗೈದು ಆಟೋದಲ್ಲಿ ಶವ ಇಟ್ಟು ಪರಾರಿಯಾದವನಿಗಾಗಿ ಪೊಲೀಸ್ ತಲಾಶ್‌
Share this Article
  • FB
  • TW
  • Linkdin
  • Email

ಸಾರಾಂಶ

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಹತ್ಯೆಗೈದು ಬಳಿಕ ಆಟೋದಲ್ಲಿ ಮೃತದೇಹವನ್ನು ಇಟ್ಟು ದುಷ್ಕರ್ಮಿ ಪರಾರಿಯಾಗಿರುವ ಘಟನೆ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ರಾಗಿಗುಡ್ಡದ ನಿವಾಸಿ ಸಲ್ಮಾ (35) ಹತ್ಯೆಯಾದ ದುರ್ದೈವಿ. 

 ಬೆಂಗಳೂರು :  ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಹತ್ಯೆಗೈದು ಬಳಿಕ ಆಟೋದಲ್ಲಿ ಮೃತದೇಹವನ್ನು ಇಟ್ಟು ದುಷ್ಕರ್ಮಿ ಪರಾರಿಯಾಗಿರುವ ಘಟನೆ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ರಾಗಿಗುಡ್ಡದ ನಿವಾಸಿ ಸಲ್ಮಾ (35) ಹತ್ಯೆಯಾದ ದುರ್ದೈವಿ

ರಾಗಿಗುಡ್ಡದ ನಿವಾಸಿ ಸಲ್ಮಾ (35) ಹತ್ಯೆಯಾದ ದುರ್ದೈವಿ. ಈ ಹತ್ಯೆ ಹಿಂದೆ ಆಕೆಯ ಸ್ನೇಹಿತನ ಪಾತ್ರವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹ ಪತ್ತೆಯಾದ ಆಟೋದ ಪರವಾನಿಗೆ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಮಕ್ಕಳ ಜತೆ ಮೃತ ಸಲ್ಮಾ ನೆಲೆಸಿದ್ದಳು

ರಾಗಿಗುಡ್ಡದಲ್ಲಿ ತನ್ನ ಮೂವರು ಮಕ್ಕಳ ಜತೆ ಮೃತ ಸಲ್ಮಾ ನೆಲೆಸಿದ್ದಳು. ಹಲವು ವರ್ಷಗಳ ಹಿಂದೆಯೇ ಆಕೆಯ ಪತಿ ಸಾವನ್ನಪ್ಪಿದ್ದರು. ರಾಗಿ ಗುಡ್ಡ ಸಮೀಪ ನಿಂತಿದ್ದ ಆಟೋದಲ್ಲಿ ಮಹಿಳೆ ಮೃತದೇಹ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಮೃತದೇಹದ ಗುರುತು ಪತ್ತೆಯಾಗಿದೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹ ಕುತ್ತಿಗೆ ಹಾಗೂ ಹೊಟ್ಟೆ ಭಾಗದಲ್ಲಿ ಗಾಯದ ಗುರುತುಗಳಿವೆ. ಚಾಕುವಿನಿಂದ ಇರಿದು ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Read more Articles on