ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಾಲ್ವರ ಬಂಧನ

| Published : Mar 30 2024, 12:46 AM IST

ಸಾರಾಂಶ

ಮಳವಳ್ಳಿ ಪಟ್ಟಣದ ಕೀರ್ತಿನಗರದ ಪ್ರಜ್ವಲ್ (21), ಕಾರ್ತಿಕ್ (20) ಹಾಗೂ ಸಿದ್ಧಾರ್ಥ ನಗರದ ಕಿಶೋರ್ (20) ಬಂಧಿತ ಆರೋಪಿಗಳು. ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪದಡಿ ಕೋಟೆ ಬೀದಿಯ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಕೀರ್ತಿನಗರದ ಬಡಾವಣೆಯ 15 ವರ್ಷದ ಬಾಲಕಿಯು ಕಳೆದ ತಿಂಗಳು ಅದೇ ಬಡಾವಣೆಯ ಸ್ನೇಹಿತೆಯ ಮನೆಗೆ ಹೋಗಿ ಬರುತ್ತಿದ್ದ ವೇಳೆ ಆರೋಪಿ ಪ್ರಜ್ವಲ್ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿದಡಿ ಓರ್ವ ಬಾಲಕ ಸೇರಿ ನಾಲ್ವರನ್ನು ಶುಕ್ರವಾರ ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಕೀರ್ತಿನಗರದ ಪ್ರಜ್ವಲ್ (21), ಕಾರ್ತಿಕ್ (20) ಹಾಗೂ ಸಿದ್ಧಾರ್ಥ ನಗರದ ಕಿಶೋರ್ (20) ಬಂಧಿತ ಆರೋಪಿಗಳು. ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪದಡಿ ಕೋಟೆ ಬೀದಿಯ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಕೀರ್ತಿನಗರದ ಬಡಾವಣೆಯ 15 ವರ್ಷದ ಬಾಲಕಿಯು ಕಳೆದ ತಿಂಗಳು ಅದೇ ಬಡಾವಣೆಯ ಸ್ನೇಹಿತೆಯ ಮನೆಗೆ ಹೋಗಿ ಬರುತ್ತಿದ್ದ ವೇಳೆ ಆರೋಪಿ ಪ್ರಜ್ವಲ್ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ನಂತರ ಆತನ ಸ್ನೇಹಿತರಾದ ಕಿಶೋರ್ ಮತ್ತು ಕಾರ್ತೀಕ್‌ ಸಹ ಬಾಲಕಿಯನ್ನು ಬ್ಲಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಗುರುವಾರ ಸಂಜೆ ಬಾಲಕಿ ಮನೆಯಿಂದ ಹೋಗಿ ತಡವಾಗಿ ಮನೆಗೆ ಬಂದ ಹಿನ್ನೆಲೆಯಲ್ಲಿ ಬಾಲಕಿಯ ಚಿಕ್ಕಮ್ಮ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಿಪಿಐ ಎಂ.ರವಿಕುಮಾರ್ ನೇತೃತ್ವದಲ್ಲಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಓರ್ವ ಬಾಲಕ ನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿವಿಧ ಕಲಂಗಳಡಿ ಪೋಕ್ಸೋ ಪ್ರಕರಣ ದಾಖಲಾಗಿದೆ.