ಸಾರಾಂಶ
- ಪ್ರಿಯಾ ಕೆರ್ವಾಶೆ- ನಿಮ್ಮ ಆ್ಯಕ್ಟಿಂಗ್ ಜರ್ನಿಯಲ್ಲಿ ಫಾದರ್ ಸಿನಿಮಾದ ಪಾತ್ರಕ್ಕಿರುವ ಮಹತ್ವ?
ನನ್ನ ಕೆರಿಯರ್‌ನಲ್ಲಿ ಬಹಳ ಮಹತ್ವದ ಸಿನಿಮಾ ಫಾದರ್. ದೊಡ್ಡ ಪ್ರೊಡಕ್ಷನ್ ಹೌಸ್, ಅತ್ಯುತ್ತಮ ನಿರ್ದೇಶಕರು, ಇವೆಲ್ಲಕ್ಕಿಂತಲೂ ಬಹಳ ಚೆನ್ನಾಗಿರುವ ಕಥೆ ನನಗೆ ಹೆಚ್ಚು ಆಪ್ತವಾಯಿತು.
- ಡಾರ್ಲಿಂಗ್ ಕೃಷ್ಣ ಜೊತೆ ಎರಡನೇ ಸಿನಿಮಾ. ಹೇಗಿದೆ ಫೀಲಿಂಗ್?
ಲವ್ ಮಾಕ್ಟೇಲ್ ಎರಡೂ ಭಾಗಗಳನ್ನೂ ಸೇರಿಸಿದರೆ ಇದು ಅವರ ಜೊತೆಗೆ ನನ್ನ ಮೂರನೇ ಚಿತ್ರ. ನನ್ನ ಸಿನಿಮಾ ಕೆರಿಯರ್ ಗ್ರಾಫ್ ಏರತೊಡಗಿದ್ದು ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಿದ ಮೇಲೆ. ಅವರೊಂದಿಗೆ ಮತ್ತೊಂದು ಸಿನಿಮಾ ಎಂದಾಗ ಖುಷಿ, ನಿರೀಕ್ಷೆ ಎರಡೂ ಇದೆ.
- ಫಾದರ್ ಸಿನಿಮಾದ ನಿಮ್ಮ ಪಾತ್ರ ಯಾವುದು?
ನನ್ನ ಕೆರಿಯರ್‌ಗೆ ಮೈಲಿಗಲ್ಲಾಗುವ ರೋಲ್ ಅಂತ ಮಾತ್ರ ಹೇಳಬಲ್ಲೆ. ವೈಟೇಜ್ ಇರುವ, ಸಹಜತೇ ಮುಖ್ಯವಾಗಿರುವ ಚಾಲೆಂಜಿಂಗ್ ಅನಿಸುವ ಪ್ರೌಢತೆ ಇರುವ ಪಾತ್ರ.- ಪಾತ್ರಕ್ಕೆ ಸಿದ್ಧತೆ?
ನನ್ನ ಲುಕ್ ಅನ್ನೇ ಬದಲಿಸಿಕೊಳ್ಳಬೇಕಿದೆ. ಹಾವ ಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ.
- ಅಂದರೆ ?
ನೋ ಮೇಕಪ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈವರೆಗೆ ಕಾಣಿಸಿಕೊಳ್ಳದ ರೀತಿಯ ಪಾತ್ರ.
- ನೀವು ಯಾವ ಬಗೆಯ ಪಾತ್ರದ ನಿರೀಕ್ಷೆಯಲ್ಲೀರಿ?
ಒಳ್ಳೊಳ್ಳೆ ಪಾತ್ರ ಮಾಡಬೇಕು ಅಂತಿದೆ. ಒಳ್ಳೆ ಕತೆ, ನಟನೆಗೆ ಅವಕಾಶ ಇರುವ ಪಾತ್ರಗಳನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತೇನೆ. ಜನ ಸಿನಿಮಾ ನೋಡಿ ಆಚೆ ಬಂದಮೇಲೂ ನೆನಪಿಟ್ಟುಕೊಳ್ಳುವಂಥಾ ರೋಲ್‌ನಲ್ಲಿ ಕಾಣಿಸಿಕೊಳ್ಳಬೇಕುಎಂಬುದು ನನ್ನ ಕನಸು. - ನಿಮ್ಮ ಪ್ರತಿಭೆಗೆ ತಕ್ಕಂತೆ ಅವಕಾಶ ಸಿಗುತ್ತಿದೆಯಾ?
ಇಲ್ಲ. ನನ್ನ ಪ್ರತಿಭೆಗೆ ತಕ್ಕಂತ ಪಾತ್ರಕ್ಕೆ ಕಾಯುತ್ತಿದ್ದೇನೆ. ಹೆಚ್ಚಿನ ಎಲ್ಲ ಸಿನಿಮಾಗಳಲ್ಲಿ ಸ್ಕ್ರೀನ್ ಸ್ಪೇಸ್ ಸಾಕಷ್ಟು ಸಿಕ್ಕಿದೆ. ಆದರೆ ನನ್ನ ಪ್ರತಿಭೆ ಮೆರೆಯಲು ಸರಿಯಾದ ಪ್ಲಾಟ್‌ಫಾರ್ಮ್ ಸಿಕ್ಕಿಲ್ಲ. ಬಹುಶಃ ಫಾದರ್ ಸಿನಿಮಾದಲ್ಲಿ ಅದು ಸಾಧ್ಯವಾಗಬಹುದು ಎಂಬ ನಂಬಿಕೆ ಇದೆ. - ಇದು ನಿಮ್ಮ ಫಸ್ಟ್ ಪ್ಯಾನ್ ಇಂಡಿಯಾ ಸಿನಿಮಾ. ಈ ಬಗ್ಗೆ?
ಕಲಾವಿದೆಯಾಗಿ ಇದು ನನಗೆ ಸಿಗುವ ಅತ್ಯುತ್ತಮ ಅವಕಾಶ ಎಂದು ನಂಬಿದ್ದೇನೆ. ಜೊತೆಗೆ ಪ್ರಕಾಶ್ ರೈ ಅವರಂಥಾ ನಟರ ಜೊತೆಗೆ ಅಭಿನಯಿಸಲು ಅವಕಾಶ ಸಿಕ್ಕಿದೆ. ನಿರ್ದೇಶಕ ರಾಜ್ ಮೋಹನ್ ಮೂಲತಃ ತಮಿಳು ಸಿನಿಮಾದವರು. ಅವರು ಕಥೆಯನ್ನು ಗ್ರಹಿಸುವ ರೀತಿ, ನಿರೂಪಿಸುವ ಕ್ರಮದಲ್ಲೊಂದು ಹೊಸತನ, ಕ್ರಿಯಾಶೀಲತೆ ಇದೆ.
)
;Resize=(128,128))
;Resize=(128,128))
;Resize=(128,128))
;Resize=(128,128))