ಅರ್ಜುನ್ ಜನ್ಯ ನಿರ್ದೇಶನದ, ರಮೇಶ್ ರೆಡ್ಡಿ ನಿರ್ಮಾಣದ, ಶಿವರಾಜ್‌ಕುಮಾರ್, ಉಪೇಂದ್ರ,ರಾಜ್ ಶೆಟ್ಟಿ ನಟಿಸಿರುವ ‘45’ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಭಾರಿ ಮೆಚ್ಚುಗೆ. ಬೆಂಗಳೂರಿನಲ್ಲಿಯೇ 50ಕ್ಕೂ ಹೆಚ್ಚು ಪ್ರದರ್ಶನ ಹೌಸ್‌ಫುಲ್ ಆಗಿವೆ. ಮೈಸೂರಿನಲ್ಲಿಯೂ ಎಲ್ಲಾ ಶೋಗಳು ಹೌಸ್‌ಫುಲ್
ಸಿನಿವಾರ್ತೆ
ಅರ್ಜುನ್ ಜನ್ಯ ನಿರ್ದೇಶನದ, ರಮೇಶ್ ರೆಡ್ಡಿ ನಿರ್ಮಾಣದ, ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ನಟಿಸಿರುವ ‘45’ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಭಾರಿ ಮೆಚ್ಚುಗೆ ದೊರೆತಿದೆ. ಬೆಂಗಳೂರಿನಲ್ಲಿಯೇ 50ಕ್ಕೂ ಹೆಚ್ಚು ಪ್ರದರ್ಶನಗಳು ಹೌಸ್‌ಫುಲ್ ಆಗಿವೆ. ಮೈಸೂರಿನಲ್ಲಿಯೂ ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ.
ಶಿವರಾಜ್‌ಕುಮಾರ್ ಅವರ ವಿಭಿನ್ನ ಪಾತ್ರಕ್ಕೆ ಮೆಚ್ಚುಗೆ
ಸಿನಿಮಾ ನೋಡಿದವರು ಶಿವರಾಜ್‌ಕುಮಾರ್ ಅವರ ವಿಭಿನ್ನ ಪಾತ್ರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜೊತೆಗೆ ಅರ್ಜುನ್ ಜನ್ಯ ನಿರ್ದೇಶನಕ್ಕೂ ಶ್ಲಾಘನೆ ವ್ಯಕ್ತವಾಗಿದೆ.
ಈ ಸಿನಿಮಾ ಇಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಬಹುಭಾಷೆಯ ಸ್ಯಾಟಲೈಟ್ ಹಕ್ಕುಗಳು ಮತ್ತು ಡಿಜಿಟಲ್ ಹಕ್ಕುಗಳು ಖರೀದಿಯಾಗಿದ್ದು, ಕನ್ನಡ ಆವೃತ್ತಿಯನ್ನು ಜೀ ಸಂಸ್ಥೆ ಖರೀದಿಸಿದೆ. ಚಿತ್ರದ ಹಿಂದಿ ಆವೃತ್ತಿಯ ವಿತರಣೆ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದೆ.
ಬಹುದಿನಗಳಿಂದ ಪ್ರಚಾರ ಕಾರ್ಯ
ಈ ಚಿತ್ರದ ಕುರಿತು ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್. ಬಿ ಶೆಟ್ಟಿ ಎಲ್ಲರೂ ಬಹುದಿನಗಳಿಂದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಸಿನಿಮಾ ಮೇಲೆ ಉತ್ತಮ ಭರವಸೆ ಹೊಂದಿದ್ದಾರೆ. ಇದೀಗ ಪ್ರೀಮಿಯರ್ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿರುವುದರಿಂದ ಚಿತ್ರತಂಡ ಸಂತಸದಲ್ಲಿದೆ.
ಸಿನಿಮಾ ಕುರಿತು ರಾಜ್ ಬಿ. ಶೆಟ್ಟಿ, ‘ನಾನು ಈ ಸಿನಿಮಾ ನಿರ್ದೇಶನ ಮಾಡಿದ್ದರೂ ಇಷ್ಟು ದಿನ ಅದೇ ಕ್ಯೂರಿಯಾಸಿಟಿ ಉಳಿಸಿಕೊಂಡಿರುತ್ತಿದ್ದೆನಾ ಅಂತ ನನಗೇ ಅನುಮಾನವಿದೆ. ಅರ್ಜುನ್ ಜನ್ಯ ಕ್ವಾಲಿಟಿಯಲ್ಲಿ ಯಾವುದೇ ಕಾಂಪ್ರೊಮೈಸ್ ಆಗಬಾರದು ಅಂತ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಅವರಿಂದ ಕಲಿತುಕೊಳ್ಳೋದು ತುಂಬಾ ಇದೆ. ಅವರಿಗೂ ಯಾವುದಕ್ಕೂ ಇಲ್ಲ ಅನ್ನದೇ ಜೊತೆ ನಿಂತ ರಮೇಶ್ ರೆಡ್ಡಿ ಅವರಿಗೂ ಒಳ್ಳೆಯದಾಗಬೇಕು’ ಅಂತ ಹೇಳಿದ್ದಾರೆ.


