ಮಮಂದಿರ ಬಳಿಕ ಬದರೀನಾಥ ದೇಗುಲದಲ್ಲಿ ಕೇಳಿ ಬಂದಿದ್ದ ಹುಂಡಿ ಅವ್ಯವಹಾರದ ತನಿಖೆ ಕೂಡ ಚುರುಕು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ, ಬಿಕೆಟಿಸಿ (ಬದರಿನಾಥ ಕೇದಾರನಾಥ ಟೆಂಪಲ್ ಟ್ರಸ್ಟ್) ಅಧ್ಯಕ್ಷರ ಮಾಜಿ ಪಿಎ ಪ್ರಮೋದ್‌ ನೌಟಿಯಾಲ್‌ರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ

ಡೆಹ್ರಾಡೂನ್‌: ರಾಮಮಂದಿರ ಬಳಿಕ ಬದರೀನಾಥ ದೇಗುಲದಲ್ಲಿ ಕೇಳಿ ಬಂದಿದ್ದ ಹುಂಡಿ ಅವ್ಯವಹಾರದ ತನಿಖೆ ಕೂಡ ಚುರುಕು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ, ಬಿಕೆಟಿಸಿ (ಬದರಿನಾಥ ಕೇದಾರನಾಥ ಟೆಂಪಲ್ ಟ್ರಸ್ಟ್) ಅಧ್ಯಕ್ಷರ ಮಾಜಿ ಪಿಎ ಪ್ರಮೋದ್‌ ನೌಟಿಯಾಲ್‌ರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ಭಾನುವಾರ ತಡರಾತ್ರಿಯೇ ಬಂಧನ

ಭಾನುವಾರ ತಡರಾತ್ರಿಯೇ ಬಂಧನವಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಮೋದ್‌ನನ್ನು ಟ್ರಸ್ಟ್‌ನಿಂದ ವಜಾಗೊಳಿಸಲಾಗಿತ್ತು

ಹಗರಣ ಬೆಳಕಿಗೆ ಬರುತ್ತಿದ್ದಂತೆ ಪ್ರಮೋದ್‌ನನ್ನು ಟ್ರಸ್ಟ್‌ನಿಂದ ವಜಾಗೊಳಿಸಲಾಗಿತ್ತು. ಕಳೆದ ವಾರ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ದೇವಾಲಯದಲ್ಲಿ ಹುಂಡಿ ಕಳವು ನಡೆದಿರುವುದು ನಿಜ ಎಂದು ವರದಿ ನೀಡಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ಅಗಿದೆ.