ನಟ ಗೋವಿಂದ ಶಿಂಧೆ ಶಿವಸೇನೆ ಸೇರ್ಪಡೆ, ಚುನಾವಣೆಗೆ ಸ್ಪರ್ಧೆ ಸಾಧ್ಯತೆ

| Published : Mar 29 2024, 12:51 AM IST / Updated: Mar 29 2024, 08:24 AM IST

ನಟ ಗೋವಿಂದ ಶಿಂಧೆ ಶಿವಸೇನೆ ಸೇರ್ಪಡೆ, ಚುನಾವಣೆಗೆ ಸ್ಪರ್ಧೆ ಸಾಧ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಬಾಲಿವುಡ್ ನಟ ಗೋವಿಂದ ಮಹಾರಾಷ್ಟ್ರದಲ್ಲಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಗೋವಿಂದ ವಾಯವ್ಯ ಮುಂಬೈ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆಸುವ ಸಾಧ್ಯತೆಯಿದೆ.

ಮುಂಬೈ: ಹಿರಿಯ ಬಾಲಿವುಡ್ ನಟ ಗೋವಿಂದ ಮಹಾರಾಷ್ಟ್ರದಲ್ಲಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಗೋವಿಂದ ವಾಯವ್ಯ ಮುಂಬೈ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆಸುವ ಸಾಧ್ಯತೆಯಿದೆ.

ಶಿವಸೇನಾ (ಯುಬಿಟಿ) ಅಭ್ಯರ್ಥಿ ಅಮೋಲ್ ಕೀರ್ತಿಕರ್‌ಗೆ ಇಲ್ಲಿ 60 ವರ್ಷ ವಯಸ್ಸಿನ ಗೋವಿಂದ ಸವಾಲು ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

2004ರ ಲೋಕಸಭೆ ಚುನಾವಣೆಯಲ್ಲಿ ಗೋವಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂಬೈ ಉತ್ತರ ಲೋಕಸಭೆಗೆ ಸ್ಪರ್ಧೆ ಮಾಡಿ, ಬಿಜೆಪಿಯ ರಾಮ್ ನಾಯಕ್‌ರನ್ನು ಸೋಲಿಸಿದ್ದರು.