ಸಾರಾಂಶ
ಮಹಿಳೆಯೊಬ್ಬಳು ಏಕಾಏಕಿ ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿದ ಪರಿಣಾಮ ಸುಮಾರು 15 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾದ ಆತಂಕಕಾರಿ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಶಂಕರಪಲ್ಲಿ (ತೆಲಂಗಾಣ): ಮಹಿಳೆಯೊಬ್ಬಳು ಏಕಾಏಕಿ ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿದ ಪರಿಣಾಮ ಸುಮಾರು 15 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾದ ಆತಂಕಕಾರಿ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಕಿಯಾ ಸೋನೆಟ್ ಎಂಬಾಕೆ ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿಕೊಂಡು ಹೋಗುತ್ತಿರುವುದು 13 ಸೆಕೆಂಡ್‌ಗಳ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಮಹಿಳೆಯನ್ನು ಬಂಧಿಸಲಾಗಿದೆ.‘ಆರೋಪಿ ಉತ್ತರ ಪ್ರದೇಶದವಳಾಗಿದ್ದು, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಶಂಕರಪಲ್ಲಿ ಸಮೀಪ ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸುತ್ತಿರುವುದನ್ನು ಕಂಡು ರೈಲ್ವೆ ಸಿಬ್ಬಂದಿ ಕಾರಿನ ಹಿಂದೆ ಓಡಿದ್ದಾರೆ. ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಕಾರಿನಿಂದ ಇಳಿಸಲು 20 ಜನ ಹರಸಾಹಸ ಪಡಬೇಕಾಯಿತು. ಆಕೆಯ ಚಾಲನಾ ಪರವಾನಗಿ ಮತ್ತು ಪ್ಯಾನ್ ಕಾರ್ಡ್ ವಶಪಡಿಸಿಕೊಂಡಿದ್ದೇವೆ’ ಎಂದು ಎಸ್‌ಪಿ ಚಂದನಾ ದೀಪ್ತಿ ತಿಳಿಸಿದ್ದಾರೆ.