ಸಂಪುಟ ಪುನಾರಚನೆಗೆ ಮಾನಸಿಕವಾಗಿ ಸಿದ್ಧಆಗಿರಿ : ಮಂತ್ರಿಗಳಿಗೆ ಸಿದ್ದು ಖುದ್ದು ಸೂಚನೆ

| N/A | Published : Oct 14 2025, 01:00 AM IST / Updated: Oct 14 2025, 04:29 AM IST

Siddaramaiah Koppal
ಸಂಪುಟ ಪುನಾರಚನೆಗೆ ಮಾನಸಿಕವಾಗಿ ಸಿದ್ಧಆಗಿರಿ : ಮಂತ್ರಿಗಳಿಗೆ ಸಿದ್ದು ಖುದ್ದು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ರಾಜ್ಯಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಹಿರಿಯ ಸಚಿವರಿಗೆ ಇಂಥ ಬೆಳವಣಿಗೆ ನಡೆಯುವ ಸಾಧ್ಯತೆಯ ಸುಳಿವು ನೀಡಿ ಮಾನಸಿಕವಾಗಿ ಸಿದ್ಧರಾಗಿರುವಂತೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

  ಬೆಂಗಳೂರು :  ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ರಾಜ್ಯಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಹಿರಿಯ ಸಚಿವರಿಗೆ ಇಂಥ ಬೆಳವಣಿಗೆ ನಡೆಯುವ ಸಾಧ್ಯತೆಯ ಸುಳಿವು ನೀಡಿ ಮಾನಸಿಕವಾಗಿ ಸಿದ್ಧರಾಗಿರುವಂತೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಪುಟ ಸದಸ್ಯರಿಗೆ ಸೋಮವಾರ ಔತಣಕೂಟ ನೀಡಿದ್ದ ಸಿದ್ದರಾಮಯ್ಯ ಅವರು ಪಕ್ಷ ಸಂಘಟನೆಯ ವಿಶೇಷ ಹೊಣೆಗಾರಿಕೆ ಹೊರಲು ಸಂಪುಟದ ಹಿರಿಯ ಸಚಿವರು ಮಾನಸಿಕ ಸಿದ್ಧರಾಗಿರಬೇಕು ಎಂದು ನೇರ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

‘ಅಲ್ಲದೆ, ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಹೊಸಬರಿಗೆ ಅವಕಾಶ ನೀಡಲು ಸಂಪುಟ ಪುನಾರಚನೆ ಅನಿವಾರ್ಯ ಎಂದು ಹೈಕಮಾಂಡ್‌ ತಿಳಿಸಿದೆ. ಹೀಗಾಗಿ ಸಚಿವರು ಸಂಪುಟ ಪುನರ್‌ರಚನೆಗೆ ಮಾನಸಿಕವಾಗಿ ಸಿದ್ಧವಾಗಿರಿ’ ಎಂದೂ ಹೇಳಿದರು ಎನ್ನಲಾಗಿದೆ.

ಸಂಪುಟದಿಂದ ಕೆಲವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕಾಗಬಹುದು. ಸಚಿವ ಸ್ಥಾನ ತ್ಯಾಗ ಮಾಡಿದವರಿಗೆ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಿದ್ದು, ಪಕ್ಷದ ಸಂಘಟನೆಯ ಮಹತ್ವದ ಜವಾಬ್ದಾರಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹೈಕಮಾಂಡ್‌ಗೆ ಆಸಕ್ತಿ:

ಹೈಕಮಾಂಡ್‌ ಪುನಾರಚನೆಗೆ ಆಸಕ್ತಿ ಹೊಂದಿದೆ. ಹೊಸಬರಿಗೆ ಅವಕಾಶ ನೀಡಲು ಇದು ಅನಿವಾರ್ಯವೂ ಕೂಡ. ಹೈಕಮಾಂಡ್‌ ಬಳಿ ಸಚಿವರ ರಿಪೋರ್ಟ್‌ ಕಾರ್ಡ್‌ ಇದ್ದು, ಅದರ ಆಧಾರದ ಮೇಲೆ ಯಾವಾಗ ಬೇಕಾದರೂ ಸೂಚನೆ ನೀಡಬಹುದು. ಹೀಗಾಗಿ ಮಾನಸಿಕವಾಗಿ ಸಿದ್ಧವಾಗಿರಿ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಪಕ್ಷ ಸಂಘಟನೆ ಮುಖ್ಯ:

ಸರ್ಕಾರದ ಆಡಳಿತದ ಜತೆಗೆ ಮುಂದಿನ ಬಾರಿಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷ ಸಂಘಟನೆಯೂ ಮುಖ್ಯ. ಪಕ್ಷವನ್ನು ಬಲವಾಗಿ ಸಂಘಟಿಸಿ ಮುಂದಿನ ಜಿಬಿಎ ಚುನಾವಣೆ, ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಜತೆಗೆ 2028ರ ಚುನಾವಣೆಗೂ ಸಿದ್ಧತೆ ನಡೆಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿರುವುದಾಗಿ ತಿಳಿದುಬಂದಿದೆ.

Read more Articles on