2022-23ರಲ್ಲಿ ಕೈಗೆ 452 ಕೋಟಿ ರು. ಆದಾಯ ಹರಿದು ಬಂದಿತ್ತು. ಈ ನಿಧಿಯ ಶೇ.15ರಷ್ಟು ಮೊತ್ತ ಭಾರತ್‌ ಜೊಡೊ ಯಾತ್ರೆಗೆ ವ್ಯಯ ಮಾಡಿರುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ನವದೆಹಲಿ: ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್‌ ಜೋಡೋ ಯಾತ್ರೆ’ಗೆ ಬರೋಬ್ಬರಿ 71.8 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್‌ ತನ್ನ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಪ್ರಕಟಿಸಿದೆ.

ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಇತ್ತೀಚಿನ ತನ್ನ ವಾರ್ಷಿಕ ವರದಿ ಪ್ರಕಾರ, 2022- 23ನೇ ಸಾಲಿನಲ್ಲಿ ಕಾಂಗ್ರೆಸ್‌ನ ಒಟ್ಟು ಆದಾಯವು 452 ಕೋಟಿ ರು.ಗಳಷ್ಟಿದೆ. ಅಂದರೆ ಜೋಡೋ ಯಾತ್ರೆಯ ಒಟ್ಟು ವೆಚ್ಚವು ಕಾಂಗ್ರೆಸ್‌ ಬಳಿ ಇರುವ ಒಟ್ಟು ಮೊತ್ತದ ಶೇ.15.3% ರಷ್ಟಿದೆ. 

ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ 2022ರ ಸಪ್ಟೆಂಬರ್‌ನಿಂದ 2023ರ ಜನವರಿವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 4,000 ಕಿ.ಮೀ ಪಾದಯಾತ್ರೆ ಮೂಲಕ ಜೋಡೋ ಯಾತ್ರೆ ಹಮ್ಮಿಕೊಂಡಿದ್ದರು.