ಭಾರೀ ಹಿಂಸೆಗೆ ಸಾಕ್ಷಿಯಾದ ಹಲ್ದ್ವಾನಿಯಲ್ಲಿ ಕರ್ಫ್ಯೂ ಹಿಂತೆಗೆತ: ತನಿಖೆ ಶುರು

| Published : Feb 11 2024, 01:46 AM IST / Updated: Feb 11 2024, 12:19 PM IST

ಭಾರೀ ಹಿಂಸೆಗೆ ಸಾಕ್ಷಿಯಾದ ಹಲ್ದ್ವಾನಿಯಲ್ಲಿ ಕರ್ಫ್ಯೂ ಹಿಂತೆಗೆತ: ತನಿಖೆ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಮದರಸಾಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆದ ಹಲ್ದ್ವಾನಿಯಲ್ಲಿ ಕರ್ಫ್ಯೂ ಹಿಂಪಡೆಯಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಹಲ್ದ್ವಾನಿ: ಅಕ್ರಮ ಮದರಸಾ ಧ್ವಂಸದ ಬಳಿಕ ಉತ್ತರಾಖಂಡದ ಹಲ್ವ್ದಾನಿಯಲ್ಲಿ ಗುರುವಾರ ಸಂಭವಿಸಿದ್ದ ಭಾರೀ ಹಿಂಸಾಚಾರ ಶನಿವಾರ ಶಾಂತ ಪರಿಸ್ಥಿತಿ ನೆಲೆಸಿದೆ. ಹಿಂಸೆಗೆ 6 ಜನರು ಬಲಿಯಾದ ಬಳಿಕ ನಗರದಲ್ಲಿ ಜಾರಿ ಮಾಡಲಾಗಿದ್ದ ಕರ್ಫ್ಯೂ ಹಿಂಪಡೆಯಲಾಗಿದೆ.

ಹಿಂಸಾಚಾರ ನಡೆದ ಬಂಬೂಲ್‌ಪುರ ಪ್ರದೇಶ ಹೊರತುಪಡಿಸಿ ನಗರದ ಇತರೆಡೆ ನಿಷೇಧಾಜ್ಞೆ ಹಿಂತೆಗೆದಿದ್ದು, ದೈನಂದಿನ ಚಟುವಟಿಕೆಗಳು ಎಂದಿನಂತೆ ಆರಂಭವಾಗಿವೆ. 

ಆದರೆ ಮುನ್ನಚ್ಚೆರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳು ಮತ್ತು ಅಂತರ್ಜಾಲ ಸೇವೆಗಳ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಈ ನಡುವೆ ಘಟನೆಯ ಕುರಿತು ಕುಮಾವೊನ್‌ ಕಮಿಷನರ್‌ ದೀಪಕ್‌ ರಾವತ್‌ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ. 

ಘಟನೆ ಸಂಬಂಧ 3 ಎಫ್‌ಐಆರ್‌ ದಾಖಲಾಗಿದ್ದು, 16 ಮಂದಿಯ ಮೇಲೆ ಆರೋಪಪಟ್ಟಿ ದಾಖಲಿಸಲಾಗಿದೆ. ಇದರ ಪೈಕಿ 5 ಮಂದಿಯನ್ನು ಇದುವರೆಗೂ ಬಂಧಿಸಿದ್ದು ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.