ಸಾರಾಂಶ
ಚೀನಿಯರಿಗೆ ಅಕ್ರಮ ವೀಸಾ ವಿತರಣೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾರ್ತಿ ಚಿದಂಬರಂ ಮೇಲೆ ಚಾರ್ಜ್‌ಶೀಟ್ ದಾಖಲಿಸಿದೆ.
ನವದೆಹಲಿ: ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಕೇಂದ್ರ ಸಚಿವರಾಗಿದ್ದ ವೇಳೆ ಪುತ್ರ ಕಾರ್ತಿ ಚಿದಂಬರಂ ಅವರು ತಲಾ 50 ಲಕ್ಷ ರು. ಕಿಕ್‌ಬ್ಯಾಕ್ ಪಡೆದು 263 ಚೀನಿಯರಿಗೆ ಅಕ್ರಮ ವೀಸಾ ವಿತರಣೆ ಮಾಡಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ.) ಕಾರ್ತಿ, ಅವರ ಆಪ್ತ ಭಾಸ್ಕರರಾಮನ್ ಹಾಗೂ ಇತರರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ. ಕಾರ್ತಿ ಪಂಜಾಬ್‌ನಲ್ಲಿ ನಿರ್ಮಿಸಲಾಗುತ್ತಿದ್ದ ಟಿಎಸ್‌ಪಿಎಲ್ ವಿದ್ಯುತ್ ಸ್ಥಾವರ ಘಟಕದ ಕೆಲಸಕ್ಕೆ ಅನುವು ಮಾಡಿಕೊಡಲು ನಿಯಮಬಾಹಿರವಾಗಿ ಕಿಕ್‌ಬ್ಯಾಕ್ ಪಡೆದು ಚೀನಿಯರಿಗೆ ಮರು ವೀಸಾ ವಿತರಣೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಆರೋಪವನ್ನು ಕಾರ್ತಿ ಚಿದಂಬರಂ ಅಲ್ಲಗಳೆದಿದ್ದಾರೆ.