ನಿನ್ನೆ ನಡೆಯಬೇಕಿದ್ದ ಐಸಿಎಸ್‌ಇ ಕೆಮಿಸ್ಟ್ರಿ ಪರೀಕ್ಷೆ ಮಾ.21ಕ್ಕೆ ಮುಂದೂಡಿಕೆ

| Published : Feb 27 2024, 01:32 AM IST

ನಿನ್ನೆ ನಡೆಯಬೇಕಿದ್ದ ಐಸಿಎಸ್‌ಇ ಕೆಮಿಸ್ಟ್ರಿ ಪರೀಕ್ಷೆ ಮಾ.21ಕ್ಕೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ನಿಗದಿಯಾಗಿದ್ದ ಇಸಿಎಸ್‌ಇ ರಸಾಯನಶಾಸ್ತ್ರ ಪರೀಕ್ಷೆಯನ್ನು ಮಂಡಳಿ ಮಾ.21ರ ಮಧ್ಯಾಹ್ನ 2ಕ್ಕೆ ಮುಂದೂಡಿದೆ.

ನವದೆಹಲಿ: ದೇಶಾದ್ಯಂತ ಸೋಮವಾರ ನಡೆಯಬೇಕಿದ್ದ ಸಿಐಎಸ್‌ಸಿಇ (ಐಸಿಎಸ್‌ಇ) ಪಠ್ಯಕ್ರಮದ 12ನೇ ತರಗತಿ ರಸಾಯನಶಾಸ್ತ್ರ ಪರೀಕ್ಷೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮಾ.21ಕ್ಕೆ ಮುಂದೂಡಲಾಗಿದೆ ಎಂದು ಮಂಡಳಿ ತಿಳಿಸಿದೆ. ಈ ಕುರಿತು ಮಂಡಳಿಯ ಉಪ ಕಾರ್ಯದರ್ಶಿ ಸಂಗೀತಾ ಭಾಟಿಯಾ ಅವರು ಎಲ್ಲಾ ಕಾಲೇಜು ಪ್ರಾಂಶುಪಾಲರಿಗೆ ಸಂದೇಶ ಕಳುಹಿಸಿದ್ದು, ರಸಾಯನಶಾಸ್ತ್ರ ಭೌತಿಕ ಪರೀಕ್ಷೆಯ ಮೊದಲ ಪತ್ರಿಕೆಯನ್ನು ಸೋಮವಾರದಿಂದ ಮಾ.21 ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಸಿಐಎಸ್‌ಸಿಇ ಮಂಡಳಿಯ 12ನೇ ತರಗತಿ ಪರೀಕ್ಷೆಗಳು ಫೆ.12ರಿಂದ ಆರಂಭವಾಗಿದ್ದವು.