ಸಾರಾಂಶ
ನವದೆಹಲಿ : ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಣಕಾಸು ಸಚಿವಾಲಯಕ್ಕೆ ತನ್ನ ಏಜೆಂಟರು ಹಾಗೂ ಅವರ ಮಾಸಿಕ ಆದಾಯ ಸರಾಸರಿಯ ಮಾಹಿತಿ ನೀಡಿದೆ. ಇದರಲ್ಲಿ, ಕರ್ನಾಟಕದಲ್ಲಿ 81,674 ಏಜೆಂಟ್‌ಗಳು ಇದ್ದು ಅವರ ಮಾಸಿಕ ಆದಾಯ ಸರಾಸರಿ 13,265 ರು. ಎಂದು ಹೇಳಿದೆ.
ಎಲ್‌ಐಸಿ ಏಜೆಂಟ್‌ಗಳು ಹಿಮಾಚಲ ಪ್ರದೇಶದಲ್ಲಿ ತಿಂಗಳಿಗೆ ಸರಾಸರಿ 10,328 ರು. ಗಳಿಸುತ್ತಾರೆ, ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ವಿಮಾ ಏಜೆಂಟ್‌ಗಳ ಅತಿ ಕಡಿಮೆ ಗಳಿಕೆ. ಇನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಎಲ್‌ಐಸಿ ಏಜೆಂಟರು ಮಾಸಿಕ ಸರಾಸರಿ 20,446 ರು. ಗಳಿಸುತ್ತಾರೆ. ಇದು ಏಜೆಂಟರ ಅತಿ ಹೆಚ್ಚು ಗಳಿಕೆ.
ಕೇಂದ್ರಾಡಳಿತದ ಪೈಕಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎಲ್‌ಐಸಿ ಅತಿ ಕಮ್ಮಿ (273) ಏಜೆಂಟರನ್ನು ಹೊಂದಿದ್ದರೆ, ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶವು ಅತಿ ಕಡಿಮೆ (12,731) ಏಜೆಂಟ್‌ಗಳನ್ನು ಹೊಂದಿದೆ ಎಂದು ಹೇಳಿದೆ.ದೇಶಾದ್ಯಂತ 13,90,920 ಏಜೆಂಟರನ್ನು ಎಲ್‌ಐಸಿ ಹೊಂದಿದೆ. ಈ ಪೈಕಿ ಉತ್ತರ ಪ್ರದೇಶವು ಗರಿಷ್ಠ ಸಂಖ್ಯೆಯ ಎಲ್‌ಐಸಿ ಏಜೆಂಟ್‌ಗಳನ್ನು ಹೊಂದಿದ್ದು, (1.84 ಲಕ್ಷಕ್ಕೂ ಹೆಚ್ಚು) ಅವರ ಸರಾಸರಿ ಮಾಸಿಕ ಆದಾಯ 11,888 ರುಪಾಯಿ.ಮಹಾರಾಷ್ಟ್ರವು 1.61 ಲಕ್ಷಕ್ಕೂ ಹೆಚ್ಚು ಎಲ್‌ಐಸಿ ಏಜೆಂಟ್‌ಗಳನ್ನು ಹೊಂದಿದ್ದು, ಸರಾಸರಿ ಮಾಸಿಕ ಆದಾಯ 14,931 ರುಪಾಯಿ. ಪ.ಬಂಗಾಳವು 1.19 ಲಕ್ಷ ಏಜೆಂಟರ ಹೊಂದಿದ್ದು ಮಾಸಿಕ ಆದಾಯ ರೂ 13,512 ರು. ಇದರೊಂದಿಗೆ ಬಂಗಾಳ ನಂ.3 ಸ್ಥಾನ ಪಡೆದಿದೆ.