ಫಾಸ್ಟ್ಯಾಗ್‌ ಪಟ್ಟಿಯಿಂದ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಔಟ್‌

| Published : Feb 17 2024, 01:18 AM IST / Updated: Feb 17 2024, 09:19 AM IST

fastag
ಫಾಸ್ಟ್ಯಾಗ್‌ ಪಟ್ಟಿಯಿಂದ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಔಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಫಾಸ್ಟ್ಯಾಗ್‌ ಪಟ್ಟಿಯಿಂದ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಔಟ್‌ ಆಗಿದ್ದು, ಆರ್‌ಬಿಐ ಶಿಸ್ತು ಕ್ರಮ, ಇ.ಡಿ. ತನಿಖೆ ಆರಂಭ ಬೆನ್ನಲ್ಲೇ ನಿಷೇಧ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ: ಗ್ರಾಹಕರ ಬ್ಯಾಂಕ್‌ ಖಾತೆ ಆರಂಭದ ವೇಳೆ ಕೆವೈಸಿ ನಿಯಮಗಳನ್ನು ಪಾಲನೆ ಮಾಡದ ಗಂಭೀರ ಆರೋಪ ಎದುರಿಸುತ್ತಿರುವ ‘ಪೇಟಿಎಂ ಪೇಮೆಂಟ್‌ ಬ್ಯಾಂಕ್‌’ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. 

ಫಾಸ್ಟ್ಯಾಗ್‌ ವಿತರಿಸುವ ಬ್ಯಾಂಕ್‌ಗಳ ಪಟ್ಟಿಯಿಂದ ಇದೀಗ ‘ಪೇಟಿಎಂ ಪೇಮೆಂಟ್‌ ಬ್ಯಾಂಕ್‌’ ಅನ್ನು ಕೈಬಿಡಲಾಗಿದೆ.

ದೇಶದಲ್ಲಿನ ಎಲ್ಲಾ ಟೋಲ್‌ಗಳ ಶುಲ್ಕ ನಿರ್ವಹಣೆಯ ಹೊಣೆ ಹೊತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಗಸಂಸ್ಥೆಯಾದ ಇಂಡಿಯನ್‌ ಹೈವೇಸ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿ. (ಐಎಚ್‌ಎಂಸಿಎಲ್‌) ಈ ನಿರ್ಧಾರ ಕೈಗೊಂಡಿದೆ.

ಈ ಕುರಿತು ಎಕ್ಸ್‌ (ಟ್ವೀಟರ್‌)ನಲ್ಲಿ ಮಾಹಿತಿ ಹಂಚಿಕೊಂಡಿರುವ ಐಎಚ್‌ಎಂಸಿಎಲ್‌, ‘ಅಡಚಣೆ ರಹಿತ ಸಂಚಾರಕ್ಕಾಗಿ ನಿಮ್ಮ ಫಾಸ್ಟ್ಯಾಗ್‌ಗಳನ್ನು 32 ನೋದಾಯಿತ ಬ್ಯಾಂಕ್‌ಗಳಲ್ಲಿ ಖರೀದಿಸಿ ಎಂದು ಅರ್ಹ ಬ್ಯಾಂಕ್‌ಗಳ ಪಟ್ಟಿಯೊಂದನ್ನು ಪ್ರಕಟಿಸಿದೆ. 

ಇದರಲ್ಲಿ ‘ಪೇಟಿಎಂ ಪೇಮೆಂಟ್‌ ಬ್ಯಾಂಕ್‌’ ಅನ್ನು ಕೈಬಿಡಲಾಗಿದೆ.ಕೆವೈಸಿ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಫೆ.29ರಿಂದ ವಿವಿಧ ಸೇವೆಗಳನ್ನು ರದ್ದುಪಡಿಸುವಂತೆ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ಆರ್‌ಬಿಐ ಇತ್ತೀಚೆಗೆ ಸೂಚಿಸಿತ್ತು. 

ಜೊತೆಗೆ ನಿಯಮಬಾಹಿರವಾಗಿ ಆರಂಭಿಸಲಾದ ಕೆಲ ಬ್ಯಾಂಕ್‌ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರಬಹುದೆಂಬ ಶಂಕೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡಾ ಬ್ಯಾಂಕ್‌ ವಿರುದ್ಧ ತನಿಖೆ ಆರಂಭಿಸಿದೆ.