ಸಾರಾಂಶ
ಇಂದು ಸಂಜೆ ಇಸ್ರೋ ಹವಾಮಾನ ಉಪಗ್ರಹ ಉಡ್ಡಯನ ಮಾಡಲಿದೆ. ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಇನ್‌ಸ್ಯಾಟ್ 3ಡಿಎಸ್ ಉಪಗ್ರಹವನ್ನು ಉಡ್ಡಯನ ಮಾಡಲಿದೆ.
ಚೆನ್ನೈ: ಹವಾಮಾನ ಪರಿಶೀಲನೆ ಮತ್ತು ವಿಪತ್ತು ಮುನ್ಸೂಚನೆ ವಿಷಯದಲ್ಲಿ ಹೆಚ್ಚಿನ ನೆರವು ನೀಡುವ ಉದ್ದೇಶ ಹೊಂದಿರುವ ‘ಇನ್‌ಸ್ಯಾಟ್ 3ಡಿಎಸ್’ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಉಡ್ಡಯನ ಮಾಡಲಿದೆ.
51.7 ಮೀಟರ್ ಎತ್ತರ, 420 ಕೆಜಿ ತೂಕವಿರುವ ಜಿಎಸ್‌ಎಲ್‌ವಿ ಎಫ್ 14 ರಾಕೆಟ್ ತನ್ನ ಶನಿವಾರ ಸಂಜೆ 5.35ಕ್ಕೆ ಉಪಗ್ರಹವನ್ನು ಹೊತ್ತು ನೆಗೆಯಲಿದೆ.
ಇನ್‌ಸ್ಯಾಟ್ 3ಡಿಎಸ್ ಭಾರತದ 3ನೇ ತಲೆಮಾರಿನ ಹವಾಮಾನ ಉಪಗ್ರಹವಾಗಿದ್ದು ಭೂಮಿ ಮತ್ತು ಸಮುದ್ರದ ಮೇಲ್ಮೈ ಅಧ್ಯಯನ ಮಾಡುವ ಮೂಲಕ ಹವಾಮಾನ ಮತ್ತು ವಿಪತ್ತಿನ ಕುರಿತು ಇನ್ನಷ್ಟು ನಿಖರ ಮತ್ತು ವಿಸ್ತಾರವಾದ ಮಾಹಿತಿ ಹಂಚಿಕೊಳ್ಳಲಿದೆ.