ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! ಭಾನುವಾರ ಇರಾನ್‌ ಮೇಲೆ ಅಮೆರಿಕ ನಡೆಸಿದ ಹಠಾತ್‌ ದಾಳಿಯನ್ನೂ ಈ ‘ಪಿಜ್ಜಾ ಸೂಚ್ಯಂಕ’ ನಿಖರವಾಗಿ ಪತ್ತೆಮಾಡಿತ್ತು ಎನ್ನಲಾಗಿದೆ.

ವಾಷಿಂಗ್ಟನ್‌: ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! ಭಾನುವಾರ ಇರಾನ್‌ ಮೇಲೆ ಅಮೆರಿಕ ನಡೆಸಿದ ಹಠಾತ್‌ ದಾಳಿಯನ್ನೂ ಈ ‘ಪಿಜ್ಜಾ ಸೂಚ್ಯಂಕ’ ನಿಖರವಾಗಿ ಪತ್ತೆಮಾಡಿತ್ತು ಎನ್ನಲಾಗಿದೆ.

ಶನಿವಾರ ರಾತ್ರಿ 10.30ರ ಸುಮಾರಿಗೆ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್‌ ಹತ್ತಿರದ ಪಿಜ್ಜಾ ಕೇಂದ್ರಗಳಲ್ಲಿ ಬೇಡಿಕೆ ದಿಢೀರನೆ ಏರಿಕೆಯಾಗಿತ್ತು. ಇದಾದ ಕೆಲ ಗಂಟೆಗಳ ಬಳಿಕ, ಅಮೆರಿಕ ಇರಾನ್‌ನ ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿದ ಸುದ್ದಿ ಹೊರಬಂತು. ಹೀಗಾಗುತ್ತಿರುವುದು ಇದೇ ಮೊದಲಲ್ಲ. ಜೂ.13ರಂದು ಇಸ್ರೇಲ್‌ ಇರಾನ್‌ ಮೇಲೆ ಮುಗಿಬಿದ್ದಿದ್ದ ಹಿಂದಿನ ರಾತ್ರಿಯೂ ಪೆಂಟಗನ್‌ ಸುತ್ತ ಇರುವ ಪಿಜ್ಜಾ ಜಾಯಿಂಟ್‌ಗಳಲ್ಲಿ ಬೇಡಿಕೆ ಮುಗಿಲುಮುಟ್ಟಿತ್ತು.

ಏನಿದು ಪಿಜ್ಜಾ ಸೂಚ್ಯಂಕ?:

ಸಾಮಾನ್ಯವಾಗಿ ದಾಳಿಯಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಅಧಿಕಾರಿಗಳು ಉನ್ನತ ಮಟ್ಟದ ಸುದೀರ್ಘ ಮಾತುಕತೆ ನಡೆಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಪೆಂಟಗನ್‌ನಲ್ಲೇ ಇರುವ ಕಾರಣ, ಆಗಾಗ ಪಿಜ್ಜಾ ತರಿಸಿಕೊಳ್ಳುತ್ತಿರುತ್ತಾರೆ. ಗೂಗಲ್‌ನಲ್ಲಿ ಇದರ ದಟ್ಟಣೆಯನ್ನು ಕಾಣಬಹುದಾಗಿದ್ದು, ಹಿಂದಿನ ದಾಳಿಗಳ ಉದಾಹರಣೆಗಳಿಂದ ಆಗಬಹುದಾದ ದಾಳಿಯನ್ನು ಊಹಿಸಲಾಗುತ್ತದೆ. ಈವರೆಗೆ ಒಟ್ಟ 21 ಬಾರಿ ಪಿಜ್ಜಾ ಇಂಡೆಕ್ಸ್‌ ಬಿಕ್ಕಟ್ಟುಗಳ ಮುನ್ಸೂಚನೆಯನ್ನು ನೀಡಿವೆ.