ರಾಖಿ ಹಬ್ಬ ಸಂಭ್ರಮ : ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಿಂದ ದಾಖಲೆಯ 12,000 ಕೋಟಿ ರು. ರಾಖಿ ವಹಿವಾಟು ನಿರೀಕ್ಷೆ

| Published : Aug 19 2024, 12:50 AM IST / Updated: Aug 19 2024, 04:53 AM IST

ರಾಖಿ ಹಬ್ಬ ಸಂಭ್ರಮ : ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಿಂದ ದಾಖಲೆಯ 12,000 ಕೋಟಿ ರು. ರಾಖಿ ವಹಿವಾಟು ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ರಾಖಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶಾದ್ಯಂತ ದಾಖಲೆಯ ₹12,000 ಕೋಟಿಗೂ ಹೆಚ್ಚು ರಾಖಿ ವ್ಯಾಪಾರವನ್ನು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರೀಕ್ಷಿಸಿದೆ.

ನವದೆಹಲಿ: ಸೋಮವಾರ ರಾಖಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶಾದ್ಯಂತ ದಾಖಲೆಯ ₹12,000 ಕೋಟಿಗೂ ಹೆಚ್ಚು ರಾಖಿ ವ್ಯಾಪಾರವನ್ನು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರೀಕ್ಷಿಸಿದೆ.

ಮಾರುಕಟ್ಟೆಗಳಲ್ಲಿ ರಾಖಿ ಖರೀದಿಗೆ ಭಾರಿ ನೂಕು ನುಗ್ಗಲು ಕಂಡು ಬರುತ್ತಿದ್ದು, ಜನರು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿಂದೆ ಆಟಿಕೆ ಹಾಗೂ ಇತರರ ವಸ್ತುಗಳಂತೆ ರಾಖಿ ಮಾರುಕಟ್ಟೆಯಲ್ಲೂ ಚೀನೀ ರಾಖಿಗಳ ಹಾವಳಿ ಇತ್ತು. ಆದರೆ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಚೈನೀಸ್ ರಾಖಿಗಳಿಗಿಂತ ಸ್ಥಳೀಯ ರಾಖಿಗಳಿಗೆ ಭಾರಿ ಡಿಮಾಂಡ್‌ ಬಂದಿದೆ. 

ಚೀನೀ ರಾಖಿಗಳು ಹೆಚ್ಚೂ ಕಮ್ಮಿ ಮಾರುಕಟ್ಟೆಯಿಂದ ಕಣ್ಮರೆ ಆಗಿವೆ.ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಚಾಂದಿನಿ ಚೌಕ್‌ ಸಂಸದ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ‘ಕಳೆದ ವರ್ಷದ ಸುಮಾರು ₹ 10,000 ಕೋಟಿ ವ್ಯಾಪಾರಕ್ಕೆ ಹೋಲಿಸಿದರೆ ರಾಖಿ ಹಬ್ಬದ ವ್ಯಾಪಾರವು ಈ ವರ್ಷ ₹ 12,000 ಕೋಟಿಗೆ ತಲುಪುವ ನಿರೀಕ್ಷೆ ಇದೆ’ ಎಂದರು.

‘2022ರಲ್ಲಿ ಸುಮಾರು ₹7,000 ಕೋಟಿ, 2021ರಲ್ಲಿ ₹6,000 ಕೋಟಿ, 2020ರಲ್ಲಿ ₹5,000 ಕೋಟಿ, 2019ರಲ್ಲಿ ₹3,500 ಕೋಟಿ, 2018ರಲ್ಲಿ ₹3,000 ಕೋಟಿ ವ್ಯಾಪಾರ ಆಗಿತ್ತು’ ಎಂದು ಎಂದು ಖಂಡೇಲ್‌ವಾಲ್‌ ಮಾಹಿತಿ ನೀಡಿದರು.

ತರಹೇವಾರಿ ರಾಖಿ: ಈ ವರ್ಷ ರಾಖಿಗಳ ವಿಶೇಷತೆ ಎಂದರೆ, ದೇಶದ ವಿವಿಧ ನಗರಗಳ ಪ್ರಸಿದ್ಧ ಉತ್ಪನ್ನಗಳಿಂದ ವಿಶೇಷ ರೀತಿಯ ರಾಖಿಗಳನ್ನು ತಯಾರಿಸಲಾಗಿದೆ.ನಾಗಪುರದಲ್ಲಿ ತಯಾರಿಸಿದ ಖಾದಿ ರಾಖಿ, ಜೈಪುರದ ಸಂಗನೇರಿ ಆರ್ಟ್ ರಾಖಿ, ಪುಣೆಯ ಸೀಡ್‌ ರಾಖಿ, ಮಧ್ಯಪ್ರದೇಶದ ಸತ್ನಾದ ಉಣ್ಣೆ ರಾಖಿ, ಬುಡಕಟ್ಟು ವಸ್ತುಗಳಿಂದ ಮಾಡಿದ ಬಿದಿರಿನ ರಾಖಿ, ಅಸ್ಸಾಂನ ಟೀ ಲೀಫ್ ರಾಖಿ, ಕೋಲ್ಕತ್ತಾದ ಸೆಣಬು ರಾಖಿ , ಮುಂಬೈನ ಸಿಲ್ಕ್ ರಾಖಿ , ಕಾನ್ಪುರದ ಪರ್ಲ್ ರಾಖಿ, ಬಿಹಾರದ ಮಧುಬನಿ ಮತ್ತು ಮೈಥಿಲಿ ಆರ್ಟ್ ರಾಖಿ , ಪಾಂಡಿಚೇರಿಯ ಸಾಫ್ಟ್ ಸ್ಟೋನ್ ರಾಖಿ , ಬೆಂಗಳೂರಿನ ಹೂವಿನ ರಾಖಿಗೆ ಭಾರಿ ಬೇಡಿಕೆ ಇದೆ.