‘ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಮತ್ತು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಂಟಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಂಭೀರ ಆರೋಪ ಮಾಡಿದ್ದಾರೆ.
ತಿರುವನಂತಪುರಂ: ‘ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಮತ್ತು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಂಟಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಂಭೀರ ಆರೋಪ ಮಾಡಿದ್ದಾರೆ.
ಫೋಟೋವೊಂದನ್ನು ಸಿಎಂ ಹಂಚಿಕೊಂಡಿದ್ದಾರೆ
ಸೋನಿಯಾ ಅವರು ಉನ್ನಿಕೃಷ್ಣನ್ ಪೊಟ್ಟಿ, ಗೋವರ್ಧನ್‌ರಿಂದ ಉಡುಗೊರೆ ಸ್ವೀಕರಿಸುತ್ತಿರುವ ಫೋಟೋವೊಂದನ್ನು ಸಿಎಂ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ ಅವರು, ‘ಕೇರಳದ ಮಾಜಿ ಸಿಎಂ ಕರುಣಾಕರನ್, ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸೋನಿಯಾ ಗಾಂಧಿ ಅಪಾಯಿಂಟ್ಮೆಂಟ್ ಸಿಕ್ಕಿರಲಿಲ್ಲ. ಆದರೆ ಉನ್ನಿಕೃಷ್ಣನ್ ಪೊಟ್ಟಿಗೆ ಅಪಾಯಿಂಟ್ಮೆಂಟ್ ಸಿಕ್ಕಿದೆಯೇ? ಸೋನಿಯಾ ಹೆಚ್ಚಿನ ಭದ್ರತೆಯಿರುವ ನಾಯಕಿ.
ಆರೋಪಿಗೆ ಹೇಗೆ ಸಿಕ್ಕಿತು ಅವರ ಭೇಟಿ
ಕಾಂಗ್ರೆಸ್ ನಾಯಕರಿಗೂ ಗೊತ್ತು ಅವರ ಭೇಟಿ ಎಷ್ಟು ಕಷ್ಟ ಎನ್ನುವುದು. ಹಾಗಿದ್ದರೆ ಆರೋಪಿಗೆ ಹೇಗೆ ಸಿಕ್ಕಿತು ಅವರ ಭೇಟಿ ಅವಕಾಶ?’ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಶಬರಿಮಲೆ ಚಿನ್ನದ ಅವ್ಯವಹಾರದ ತನಿಖೆಯನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್ ಮತ್ತು ಯುಡಿಎಫ್‌ಗೆ ತಿರುಗೇಟು ನೀಡಿದ್ದಾರೆ.

