ಇರುವೆಗೆ ಹೆದರಿ ತೆಲಂಗಾಣ ಮಹಿಳೆ ಆತ್ಮ*ತ್ಯೆಗೆ ಶರಣು

| N/A | Published : Nov 07 2025, 02:00 AM IST

Woman
ಇರುವೆಗೆ ಹೆದರಿ ತೆಲಂಗಾಣ ಮಹಿಳೆ ಆತ್ಮ*ತ್ಯೆಗೆ ಶರಣು
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯದ ಆಘಾತಗಳು ಅಥವಾ ಇತರೆ ಕಾರಣಗಳಿಂದಾಗಿ ಬಹುತೇಕರಲ್ಲಿ ಒಂದಲ್ಲಾ ಒಂದು ಭಯ ಸುಪ್ತವಾಗಿ ಇರುವುದು ಸಹಜ. ಕೆಲವರಲ್ಲಿ ಅದು ಅತಿರೇಕಕ್ಕೆ ಹೋಗುವುದನ್ನೂ ಕಾಣಬಹುದು. ಹೀಗಿರುವಾಗ, ತೆಲಂಗಾಣದ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿದ್ದ ಇರುವೆಗಳಿಗೆ ಹೆದರಿ, ಆತ್ಮ*ತ್ಯೆ ಮಾಡಿಕೊಂಡ ಘಟನೆ ನಡೆದಿದೆ.

 ಹೈದರಾಬಾದ್‌: ಬಾಲ್ಯದ ಆಘಾತಗಳು ಅಥವಾ ಇತರೆ ಕಾರಣಗಳಿಂದಾಗಿ ಬಹುತೇಕರಲ್ಲಿ ಒಂದಲ್ಲಾ ಒಂದು ಭಯ ಸುಪ್ತವಾಗಿ ಇರುವುದು ಸಹಜ. ಕೆಲವರಲ್ಲಿ ಅದು ಅತಿರೇಕಕ್ಕೆ ಹೋಗುವುದನ್ನೂ ಕಾಣಬಹುದು. ಹೀಗಿರುವಾಗ, ತೆಲಂಗಾಣದ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿದ್ದ ಇರುವೆಗಳಿಗೆ ಹೆದರಿ, ಆತ್ಮ*ತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬಾಲ್ಯದಿಂದಲೂ ಇರುವೆಗಳನ್ನು ಕಂಡರೆ ಭಯಭೀತರಾಗುತ್ತಿದ್ದ 25 ವರ್ಷದ ಮಹಿಳೆ, ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ತಮ್ಮ 3 ವರ್ಷದ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದಿದ್ದರು. ಸಂಜೆ ಅವರ ಪತಿ ಮನೆಗೆ ಮರಳಿದಾಗ ಬಾಗಿಲು ಒಳಗಿನಿಂದ ಮುಚ್ಚಲ್ಪಟ್ಟಿದ್ದನ್ನು ಗಮನಿಸಿ, ನೆರೆಹೊರೆಯವರ ಸಹಾಯದೊಂದಿಗೆ ಅದನ್ನು ತೆರೆದಿದ್ದಾರೆ.

ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ

 ಆಗ ಮಹಿಳೆ ಸೀರೆಯ ಸಹಾಯದಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲೇ ದೊರೆತ ಮರಣಪತ್ರದಲ್ಲಿ, ‘ನನಗೆ ಈ ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ. ನೀವು(ಪತಿ) ಮತ್ತು ಮಗಳು ಕ್ಷೇಮವಾಗಿರಿ’ ಎಂದು ಬರೆಯಲಾಗಿತ್ತು. 

ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಇರುವೆ ಕಂಡು, ಭಯ

ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಇರುವೆ ಕಂಡು, ಭಯದಿಂದ ಇಂತಹ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಹಿಳೆ ತಮ್ಮ ಭಯಕ್ಕಾಗಿ ಈ ಮೊದಲು ಆಸ್ಪತ್ರೆಯೊಂದರಲ್ಲಿ ಆಪ್ತ ಸಮಾಲೋಚನೆಗೂ ಒಳಪಟ್ಟಿದ್ದರು ಎನ್ನಲಾಗಿದೆ.

Read more Articles on