ಸಾರಾಂಶ
ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳ ಬೀಜ, ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ತೆಲಂಗಾಣ ಮತ್ತು ಆಂಧ್ರ ರಾಜ್ಯಗಳ ಗಡಿ ಭಾಗದಲ್ಲಿ ಗುರುಮಠಕಲ್, ಕೊಂಕಲ್ ಮತ್ತು ಸೈದಾಪೂರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ತೆಲಂಗಾಣ, ಆಂಧ್ರ ಭಾಗದಿಂದ ಬರುವ ಬಿ.ಟಿ. ಹತ್ತಿ ಬೀಜ ಮಾರಾಟ ತಡೆಗಟ್ಟಲು ಮತ್ತು ನಕಲಿ ಬೀಜಗಳ ಕುರಿತು ಗಡಿಭಾಗದ ಗ್ರಾಮಗಳ ರೈತರಿಗೆ ಅರಿವು ಮೂಡಿಸಲಾಯಿತು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು ಹಾಗೂ ಸಹಾಯಕ ಕೃಷಿ ನಿರ್ದೇಶಕರು, ಯಾದಗಿರಿ ಮತ್ತು ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಹಾಗೂ ಕೃಷಿ ಅಧಿಕಾರಿಗಳನ್ನೊಳಗೊಂಡ ತಂಡ ರಚನೆ ಮಾಡಲಾಗಿದೆ.
ಜಿಲ್ಲೆಯ ತೆಲಂಗಾಣ, ಆಂಧ್ರ ಗಡಿಭಾಗದ ಚೆಕ್‌ಪೋಸ್ಟ್ ಗಳಿಗೆ ಜಾರಿದಳದ ಅಧಿಕಾರಿಗಳು ಭೇಟಿ ನೀಡಿ, ಪೊಲೀಸ್ ಸಿಬ್ಬಂದಿಗಳಿಗೆ ನಕಲಿ ಬೀಜಗಳ ಸಾಗಾಣಿಕೆ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚನೆ ನೀಡಿ, ಸಂಬಂಧಿಸಿದ ಪೊಲೀಸ್ ಠಾಣೆಗಳ ಆರಕ್ಷಕ ಉಪನಿರೀಕ್ಷಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಲಾಯಿತು.ಜಂಟಿ ಕೃಷಿ ನಿರ್ದೇಶಕರು, ಜಾಗೃತಕೋಶ, ಕಲಬುರಗಿ ಮತ್ತು ತಂಡ ಒಳಗೊಂಡಂತೆ, ಯಾದಗಿರಿ ನಗರದ ವಿವಿಧ ಕೃಷಿ ಪರಿಕರ ಮಾರಾಟಗಾರರ ಮಳಿಗೆಗಳಿಗೆ ಭೇಟಿ ನೀಡಿ, ನಕಲಿ ಹತ್ತಿ ಬೀಜಗಳ ಕುರಿತು ಪರಿಶೀಲನೆ ಕೈಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.