ಜಿಲ್ಲೆಯ ಸ್ವಚ್ಛತೆಗೆ ‘ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ’

| Published : Sep 13 2025, 02:04 AM IST

ಜಿಲ್ಲೆಯ ಸ್ವಚ್ಛತೆಗೆ ‘ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ’
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಾನವನಗಳಲ್ಲಿ ನೀರಿನ ಕಾರಂಜಿಗಳನ್ನು ದುರಸ್ತಿಪಡಿಸಿ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಕ್ರಮವಹಿಸುವುದು. ಉದ್ಯಾನವನಗಳ ಸೂಕ್ತ ನಿರ್ವಹಣೆಗಾಗಿ ಉದ್ಯಾನವನದ ಸುತ್ತ ಮುತ್ತಲಿನ ಸಾರ್ವಜನಿಕರು ಮತ್ತು ಉದ್ಯಾನವನಗಳಲ್ಲಿ ವಾಯುವಿಹಾರ ವ್ಯಾಯಾಮ ಮಾಡುವ ಮತ್ತು ಆಟ ಆಡುವ ಜನರ ಹಾಗೂ ನಗರ ಸ್ಥಳೀಯ ಸಂಸ್ಥೆಯ ಸದಸ್ಯರನ್ನೊಳಗಂಡಂತೆ ಒಂದು ಸಂಘವನ್ನು ರಚಿಸಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಉದ್ಯಾನವನಗಳ ಸ್ವಚ್ಛತೆ ಮಾಡುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ವಿಶೇಷವಾಗಿ ಒಂದು ತಂಡ ರಚನೆ ಮಾಡಿ ಎಲ್ಲಾ ಭಾಗಗಳಲ್ಲಿಯೂ ಸ್ವಚ್ಛತೆ ಕಾಪಾಡುವುದು ಮತ್ತು ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲು ‘ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ’ ಸಿದ್ಧವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ನಗರಸಭೆ ಮತ್ತು ಪುರಸಭೆಯ ನಗರಗಳಲ್ಲಿನ ಉದ್ಯಾನವನಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಹಾಗೂ ಉದ್ಯಾನವನಗಳ ನಿರ್ವಹಣೆ ಕುರಿತು ಸಭೆ ನಡೆಸಿ ಮಾತನಾಡಿದರು. ಉದ್ಯಾನಗಳ ಸ್ವಚ್ಛತೆ ಕಾಪಾಡಿ

ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆಗಳನ್ನು ಮತ್ತು ಬಯಲು ವ್ಯಾಯಾಮ ಸಲಕರಣೆಗಳನ್ನು ಕೂಡಲೇ ದುರಸ್ತಿಪಡಿಸಿ ಬಣ್ಣ ಬಳೆಯುವುದು. ಉದ್ಯಾನವನಗಳಲ್ಲಿ ಮಳೆ ನೀರು ನಿಲ್ಲದಂತೆ ಆಗತ್ಯ ಕೆಲಗಳನ್ನು ತೆಗೆದುಕೊಳ್ಳುವುದು. ಉದ್ಯಾನವನಗಳಲ್ಲಿ ದೊಡ್ಡ ಮರಗಳ ಕೊಂಬೆಗಳನ್ನು ಟ್ರಿಮ್ ಮಾಡುವುದು. ಪಾಥ್ ವೇ ಪಕ್ಕದಲ್ಲಿನ ಸಣ್ಣ ಗಿಡಗಳನ್ನು ಸುಂದರವಾಗಿ ಕಾಣುವಂತೆ ಟ್ರಿಮ್ ಮಾಡಲಾಗುವುದು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ಪಾದನೆ ಮಾಡುತ್ತಿರುವ ಗೊಬ್ಬರವನ್ನು ಪಾರ್ಕ್‌ಗಳಲ್ಲಿ ಗಿಡ ಮರಗಳಿಗೆ ಬಳಸಲು ಕ್ರಮವಹಿಸುವುದು. ಉದ್ಯಾನವನಗಳಲ್ಲಿ ಒಣಗಿ ಬೀಳುವ ಎಲೆಗಳನ್ನು ಉದ್ಯಾನವನದ ಮೂಲೆಯಲ್ಲಿ ಪಿಟ್ ಮಾದರಿ ನಿರ್ಮಿಸಿ, ಗೊಬ್ಬರ ತಯಾರಿಸಲು ಕ್ರಮವಹಿಸುವುದು ಎಂದರು.

ಕಾರಂಜಿಗಳ ದುರಸ್ತಿಗೆ ಕ್ರಮ

ಉದ್ಯಾನವನಗಳಲ್ಲಿ ನೀರಿನ ಕಾರಂಜಿಗಳನ್ನು ದುರಸ್ತಿಪಡಿಸಿ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಕ್ರಮವಹಿಸುವುದು. ಉದ್ಯಾನವನಗಳ ಸೂಕ್ತ ನಿರ್ವಹಣೆಗಾಗಿ ಉದ್ಯಾನವನದ ಸುತ್ತ ಮುತ್ತಲಿನ ಸಾರ್ವಜನಿಕರು ಮತ್ತು ಉದ್ಯಾನವನಗಳಲ್ಲಿ ವಾಯುವಿಹಾರ ವ್ಯಾಯಾಮ ಮಾಡುವ ಮತ್ತು ಆಟ ಆಡುವ ಜನರ ಹಾಗೂ ನಗರ ಸ್ಥಳೀಯ ಸಂಸ್ಥೆಯ ಸದಸ್ಯರನ್ನೊಳಗಂಡಂತೆ ಒಂದು ಸಂಘವನ್ನು ರಚಿಸಲಾಗುವುದು ಎಂದು ತಿಳಿಸಿದರು.ಐವರು ನೇತೃತ್ವದ ಕಾರ್ಯಪಡೆ

ನಗರಸಭೆ ಅಭಿಯಂತರರು/ಆರೋಗ್ಯ ನಿರೀಕ್ಷಕರು ತಂಡದ ಮುಖ್ಯಸ್ಥರಾಗಿರುತ್ತಾರೆ, ಸಮುದಾಯ ಸಂಘಟನಾಧಿಕಾರಿ/ಸಂಘಟಕರು, ಸಮುದಾಯ ಮೊಬಲೈಜರ್, ಗೃಹ ರಕ್ಷಕರು, ಒಬ್ಬ ಪೊಲೀಸ್ ಸದಸ್ಯರಾಗಿರುತ್ತಾರೆ ಒಟ್ಟು ೫ ಜನರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.ತಂಡವು ಪ್ರತಿ ದಿನ ಬೆಳಗ್ಗೆ ೬ ರಿಂದ ೯ರವರೆಗೆ ಸಂಜೆ ೫ ರಿಂದ ೮ ರವರೆಗೆ ನಗರ/ಪಟ್ಟಣಗಳನ್ನು ಪರಿವೀಕ್ಷಣೆ ಮಾಡಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸುವುದು ಮತ್ತು ಇವುಗಳನ್ನು ತೆಗೆದು ತ್ಯಾಜ್ಯ ಸಂಗ್ರಹವಾಗದಂತೆ ಕ್ರಮವಹಿಸಬೇಕು ಎಂದರು.

ಪ್ರತಿ ಶನಿವಾರ ಸಾಂಸ್ಕೃತಿಕ ಸಂಜೆ

ಎಲ್ಲಾ ಉದ್ಯಾನವನಗಳಲ್ಲಿ ಇಲಾಖೆಗಳ ಸಹಕಾರದಿಂದ ಪ್ರತಿ ಶನಿವಾರ ಸಾಂಸ್ಕೃತಿಕ ಸಂಜೆ ಅಥವಾ ರಸ ಸಂಜೆ ಎಂಬ ಕಾರ್ಯಕ್ರಮವನ್ನು ಮಾಡಿ ಸಾರ್ವಜನಿಕರಿಗೆ ಮನರಂಜಿಸುವ ಕೆಲಸವನ್ನು ಮಾಡಲು ಸೂಚಿಸಿದರು.

ಸಭೆಯಲ್ಲಿ ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಮಂಗಳ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಶ್ರೀನಿವಾಸ್ ಇದ್ದರು.