‘ಪ್ರಿಯದರ್ಶಿನಿ ಕಿಂಗ್ ಆ್ಯಂಡ್ ಕ್ವೀನ್’ ಕಾರ್ಯಕ್ರಮ ಪ್ರಶಸ್ತಿ ವಿತರಣೆ

| Published : Jan 07 2025, 12:32 AM IST

ಸಾರಾಂಶ

ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಪಾಥ್ ವೇ ಎಂಟರ್‌ ಪ್ರ್ಯೆಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಅಂಡ್ ಲೇಡೀಸ್ ಸಲೂನ್ ಸಹಭಾಗಿತ್ವದಲ್ಲಿ ಹಳೆಯಂಗಡಿಯ ಹರಿ ಓಂ ಸಭಾ ಭವನದಲ್ಲಿ ಪ್ರಿಯದರ್ಶಿನಿ ಕಿಂಗ್ ಆ್ಯಂಡ್ ಕ್ವೀನ್ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿ ರಾಷ್ಟ್ರ ಮತ್ತು ರಾಜ್ಯಮಟ್ಟಗಳಲ್ಲಿ ಮಿಂಚಲು ಅವಕಾಶ ಮಾಡಿಕೊಡುತ್ತಿರುವ ಪಾಥ್ ವೇ ಎಂಟರ್‌ ಪ್ರ್ಯೆಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಅಂಡ್ ಲೇಡೀಸ್ ಸಲೂನ್ ಕಾರ್ಯ ಶ್ಲಾಘನೀಯ ಎಂದು ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್ ಹೇಳಿದ್ದಾರೆ.

ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಪಾಥ್ ವೇ ಎಂಟರ್‌ ಪ್ರ್ಯೆಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಅಂಡ್ ಲೇಡೀಸ್ ಸಲೂನ್ ಸಹಭಾಗಿತ್ವದಲ್ಲಿ ಹಳೆಯಂಗಡಿಯ ಹರಿ ಓಂ ಸಭಾ ಭವನದಲ್ಲಿ ನಡೆದ ಪ್ರಿಯದರ್ಶಿನಿ ಕಿಂಗ್ ಆ್ಯಂಡ್ ಕ್ವೀನ್ ಕಾರ್ಯಕ್ರಮದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜೇತರು: 1ರಿಂದ 6 ವರ್ಷ ಕಿಡ್ಸ್ ಮೇಲ್

ವಿನ್ನರ್ - ಲೆಹರ್ ಸಾಯಿ ,ಫಸ್ಟ್ ರನ್ನರ್ ಅಪ್ - ಆದಿಶ್ ಎ. ಕೆ.,ಸೆಕೆಂಡ್ ರನ್ನರ್ ಅಪ್ - ಹಾಯಾನ್ಷ್ ಶೆಟ್ಟಿ,1ರಿಂದ 6 ವರ್ಷ ಕಿಡ್ಸ್ ಫೀಮೇಲ್ ,ವಿನ್ನರ್ -ಚಾರ್ವಿ ಅಶ್ವಿ, ಫಸ್ಟ್ ರನ್ನರ್ ಅಪ್ - ಲೀಶಾ ,ಸೆಕೆಂಡ್ ರನ್ನರ್ ಅಪ್ - ದೀಪಾಂಜಲಿ .

6ರಿಂದ 12 ವರ್ಷ ಮಿಸ್ಸಿ :ವಿನ್ನರ್ - ದೀಮಹಿ ,ಫಸ್ಟ್ ರನ್ನರ್ ಅಪ್ - ವಿಯಾ ಸಾಯಿ, ಸೆಕೆಂಡ್ ರನ್ನರ್ ಅಪ್ - ಸನ್ವಿತ ಡಿಸೋಜ ,6ರಿಂದ 12 ವರ್ಷ ಮಾಸ್ಟರ್: ವಿನ್ನರ್- ರುಷಬ್ ರಾವ್ ,ಫಸ್ಟ್ ರನ್ನರ್ ಅಪ್ - ಕರಣ್ ಡಿ ಸಾಲ್ಯಾನ್ ,ಸೆಕೆಂಡ್ ರನ್ನರ್ ಅಪ್ - ಶೌರ್ಯನ್ ,13ರಿಂದ 19 ವರ್ಷ ಟೀನ್: ವಿನ್ನರ್ - ರಕ್ಷಿತಾ, ಫಸ್ಟ್ ರನ್ನರ್ ಅಪ್ - ನಿಯತಿ ಪಿ. ಸುವರ್ಣ, ಸೆಕೆಂಡ್ ರನ್ನರ್ ಅಪ್ - ದಿಶಾ ಕೆ ಪೂಜಾರಿ ,19 ಮೇಲ್ಪಟ್ಟ ಮಿಸ್: ವಿನ್ನರ್ - ಸಾನಿಧ್ಯ ಶೆಟ್ಟಿ, ಫಸ್ಟ್ ರನ್ನರ್ ಅಪ್ - ಚೈತ್ರಲಿ ಶೆಟ್ಟಿ, ಸೆಕೆಂಡ್ ರನ್ನರ್ ಅಪ್ - ತಸ್ಮಿತ , ಮಿಸಸ್ :ವಿನ್ನರ್- ಸುನಾಯ್ನ ಫಸ್ಟ್ ರನ್ನರ್ ಅಪ್ - ಅಂಕಿತ ಶೆಟ್ಟಿ , ಸೆಕೆಂಡ್ ರನ್ನರ್ ಅಪ್ - ಪ್ರತೀಕ್ಷಾ ಅವರನ್ನು ಕಿರೀಟ ಹಾಗೂ ಶಾಶ್ವತ ಫಲಕದೊಂದಿಗೆ ಗೌರವಿಸಲಾಯಿತು.

ತೀರ್ಪುಗಾರರಾದ ಕ್ಲಾಸಿಕ್ ಮಿಸಸ್ ಇಂಡಿಯಾ ಕರ್ನಾಟಕ ವಿಜೇತೆ ಸಬಿತಾ ರಂಜಿತ್ ರಾವ್, ಕ್ಲಾಸಿಕ್ ಮಿಸಸ್ ಇಂಡಿಯಾ ಕರ್ನಾಟಕ ಥರ್ಡ್ ರನ್ನರ್ ಅಪ್ ಡಾ.ಅರ್ಚನಾ ಭಟ್, ಮಿಸಸ್ ಇಂಡಿಯಾ ಕರ್ನಾಟಕ ಸೆಕೆಂಡ್ ರನ್ನರ್ ಅಪ್ ವಿದ್ಯಾ ಸಂಪತ್ ಕರ್ಕೇರ, ಮಿಸಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಆಗಮಿಸಿದ್ದರು. ಸಹ ಪ್ರಾಯೋಜಕರಾದ ಪಡುಬಿದ್ರಿ ಗ್ಲಾಮರಸ್ ಸ್ನಿಪ್ ಸೆಲೂನ್ ನ ನಿಶಾ ಸಂದೇಶ ಸಾಲ್ಯಾನ್, ಮರ್ಸಿ ಬ್ಯೂಟಿ ಅಂಡ್ ಲೇಡೀಸ್ ಸಲೂನ್ ಆಡಳಿತ ನಿರ್ದೇಶಕಿ ಮರ್ಸಿ ವೀಣಾ ಡಿಸೋಜಾ, ರಾಜ್ಯ ಸೇವಾದಳದ ಪ್ರಧಾನ ಕಾರ್ಯದರ್ಶಿ ಧರ್ಮಾನಂದ ಶೆಟ್ಟಿಗಾರ್, ಪಾಥ್ ವೇ ಸಂಸ್ಥೆಯ ದೀಪಕ್ ಗಂಗೋಲಿ, ವಿಲ್ಸನ್ ಡಿಸೋಜ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಸುದರ್ಶನ್ ವಂದಿಸಿದರು. ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ನಿರೂಪಿಸಿದರು.