ಸಾರಾಂಶ
9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ, ಡಿ.ಸುಧಾಕರ, ಶಿವರಾಜ ತಂಗಡಗಿ, ಕೆ.ಎನ್ ರಾಜಣ್ಣ, ಮಧು ಬಂಗಾರಪ್ಪ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಸಚಿವರುಗಳು ಮತ್ತು ಮಠಾಧೀಶರು ಭಾಗವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಗೋಕಾಕ
ಅನಿವಾರ್ಯ ಕಾರಣಗಳಿಂದ ಫೆ. 10 ಮತ್ತು 11ರಂದು ನಡೆಯಬೇಕಿದ್ದ ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದಪುರಿ ಸ್ವಾಮಿಗಳ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಹಾಗೂ ಶ್ರೀ ಉಪವೀರ ಜರು ವಿದ್ಯಾ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಮತ್ತು ಧಾರ್ಮಿಕ ಸಮಾರಂಭವು ಫೆ.9 ಮತ್ತು 10ರಂದು ಹೊಸದುರ್ಗದ ಸುಕ್ಷೇತ್ರ ಬ್ರಹ್ಮವಿದ್ಯಾನಗರದಲ್ಲಿ ಜರುಗಲಿದೆ ಎಂದು ಶ್ರೀ ಭಗೀರಥ ಉಪ್ಪಾರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಜಕಬಾಳ ತಿಳಿಸಿದ್ದಾರೆ.ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ, ಡಿ.ಸುಧಾಕರ, ಶಿವರಾಜ ತಂಗಡಗಿ, ಕೆ.ಎನ್ ರಾಜಣ್ಣ, ಮಧು ಬಂಗಾರಪ್ಪ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಸಚಿವರುಗಳು ಮತ್ತು ಮಠಾಧೀಶರು ಭಾಗವಹಿಸಲಿದ್ದಾರೆ. ಎರಡು ದಿನ ನಡೆಯಲಿರುವ ಭಗೀರಥ ಉಪ್ಪಾರ ಸಮಾಜದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಪತ್ರಿಕಾಗೊಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೆನ್ನವರ, ಸೇರಿದಂತೆ ಅನೇಕರು ಇದ್ದರು.