ಹಾವೇರಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಅ. 27ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ 6,28,297 ಪುರುಷ, 6,04,969 ಮಹಿಳಾ ಹಾಗೂ 28 ಇತರೆ ಸೇರಿದಂತೆ ಜಿಲ್ಲೆಯಲ್ಲಿ 12,33,294 ಮತದಾರರಿದ್ದಾರೆ.

ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರಕ್ಕೆ ಸಂಬಂಧಿಸಿದಂತೆ ಹೊರಡಿಸಿದ ವೇಳಾಪಟ್ಟಿಯಂತೆ ಮಂಗಳವಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಹೆಸರು ಪ್ರಕಟವಾದ ಕುರಿತು ಸಂಬಂಧಿಸಿದ ಮತಗಟ್ಟೆ, ತಹಸೀಲ್ದಾರ್ ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಪರಿಶೀಲಿಸಿಕೊಳ್ಳುವುದು ಮತ್ತು ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‌ಸೈಟ್ ನಲ್ಲಿಯೂ ಸಹ ಪ್ರಕಟವಾಗಿದ್ದು, ಪರಿಶೀಲಿಸಿಕೊಳ್ಳಲು ಕೋರಲಾಗಿದೆ.

ಜಿಲ್ಲೆಯಲ್ಲಿ 1,559 ಮತಗಟ್ಟೆಗಳಿದ್ದು, ಹಾನಗಲ್ಲ ಕ್ಷೇತ್ರದಲ್ಲಿ 1,04,549 ಪುರುಷ, 99,784 ಮಹಿಳಾ ಹಾಗೂ 2 ಇತರೆ ಸೇರಿ 2,04,335 ಮತದಾರರು (256 ಮತಗಟ್ಟೆ), ಶಿಗ್ಗಾಂವಿ ಕ್ಷೇತ್ರದಲ್ಲಿ 1,13,367 ಪುರುಷ, 1,07,652 ಮಹಿಳಾ ಹಾಗೂ 8 ಇತರೆ ಸೇರಿ 2,21,027 ಮತದಾರರಿದ್ದಾರೆ. (276 ಮತಗಟ್ಟೆ), ಹಾವೇರಿ -1,10,351 ಪುರುಷ, 1,05,927 ಮಹಿಳಾ ಹಾಗೂ 8 ಇತರೆ ಸೇರಿ 2,16,286 ಮತದಾರರು (272 ಮತಗಟ್ಟೆ), ಬ್ಯಾಡಗಿ -1,00,836 ಪುರುಷ, 98,270 ಮಹಿಳಾ ಹಾಗೂ 2 ಇತರೆ ಸೇರಿ 1,99,108 ಮತದಾರರು (251 ಮತಗಟ್ಟೆ), ಹಿರೇಕೆರೂರು -90,422 ಪುರುಷ, 86,837 ಮಹಿಳಾ ಹಾಗೂ 4 ಇತರೆ ಸೇರಿ 1,77,263 ಮತದಾರರು (235 ಮತಗಟ್ಟೆ) ಹಾಗೂ ರಾಣಿಬೆನ್ನೂರು -1,08,772 ಪುರುಷ, 1,06,499 ಮಹಿಳಾ ಹಾಗೂ 4 ಇತರೆ ಸೇರಿ 2,15,275 ಮತದಾರರಿದ್ದಾರೆ (269 ಮತಗಟ್ಟೆ).

ಯುವ ಮತದಾರರು: ಅಂತಿಮ ಮತದಾರರ ಪಟ್ಟಿಯಲ್ಲಿ 9073 ಪುರುಷ, 7763 ಮಹಿಳೆಯರು ಸೇರಿ 16,836 ಯುವ ಮತದಾರರಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ 1441 ಪುರುಷ ಹಾಗೂ 1209 ಮಹಿಳೆಯರು ಸೇರಿ 2650 ಮತದಾರರು, ಶಿಗ್ಗಾಂವಿ - 1874 ಪುರುಷ ಹಾಗೂ 1466 ಮಹಿಳೆಯರು ಸೇರಿ 3340 ಮತದಾರರು, ಹಾವೇರಿ 1267 ಪುರುಷ ಹಾಗೂ 1009 ಮಹಿಳೆಯರು ಸೇರಿ 2276 ಮತದಾರರು, ಬ್ಯಾಡಗಿ 1391 ಪುರುಷ ಹಾಗೂ 1276 ಮಹಿಳೆಯರು ಸೇರಿ 2667 ಮತದಾರರು, ಹಿರೇಕೆರೂರು 1367 ಪುರುಷ ಹಾಗೂ 1201 ಮಹಿಳೆಯರು ಸೇರಿ 2568 ಮತದಾರರು ಹಾಗೂ ರಾಣೇಬೆನ್ನೂರು 1733 ಪುರುಷ ಹಾಗೂ 1602 ಮಹಿಳೆಯರು ಸೇರಿ 3335 ಮತದಾರರಿದ್ದಾರೆ.


ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಕರ್ನಾಟಕ ಮುಖ್ಯ ಚುನಾವಣಾಕಾರಿಗಳ ಅಧಿಕೃತ ಜಾಲತಾಣದಲ್ಲಿ ಮತ್ತು ಜಿಲ್ಲೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.