ಆಟೋ ನಿಲ್ದಾಣ ಸ್ಥಾಪನೆಗೆ 17 ಲಕ್ಷ ಅನುದಾನ: ಕೆ.ಎಸ್ . ಆನಂದ್

| Published : Feb 13 2024, 12:45 AM IST

ಆಟೋ ನಿಲ್ದಾಣ ಸ್ಥಾಪನೆಗೆ 17 ಲಕ್ಷ ಅನುದಾನ: ಕೆ.ಎಸ್ . ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಡೂರು ಪಟ್ಟಣದ ಆಯ್ದ ಸ್ಥಳಗಳಲ್ಲಿ ಸುಸಜ್ಜಿತ ಆಟೋ ನಿಲ್ದಾಣಗಳ ನಿರ್ಮಾಣಕ್ಕಾಗಿ 17 ಲಕ್ಷ ರು.ಅನುದಾನ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಬಸವೇಶ್ವರ ವೃತ್ತದ ಬಳಿ ಶ್ರೀವೆಂಕಟೇಶ್ವರ ಆಟೋ ನಿಲ್ದಾಣದ ಕಾಮಗಾರಿಗೆ ಭೂಮಿಪೂಜೆ

ಕನ್ನಡಪ್ರಭ ವಾರ್ತೆ, ಕಡೂರು

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಡೂರು ಪಟ್ಟಣದ ಆಯ್ದ ಸ್ಥಳಗಳಲ್ಲಿ ಸುಸಜ್ಜಿತ ಆಟೋ ನಿಲ್ದಾಣಗಳ ನಿರ್ಮಾಣಕ್ಕಾಗಿ 17 ಲಕ್ಷ ರು.ಅನುದಾನ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ 4 ಲಕ್ಷ ರು. ವೆಚ್ಚದಲ್ಲಿ ಶ್ರೀವೆಂಕಟೇಶ್ವರ ಆಟೋ ನಿಲ್ದಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬಸವೇಶ್ವರ ವೃತ್ತದ ಬಳಿ ಆಟೋ ನಿಲ್ದಾಣ ನಿರ್ಮಿಸಲು 4 ಲಕ್ಷ ರು. ಹಾಗೂ ಕೆಎಸ್‍ಆರ್ ಟಿ ಸಿ ಮುಂಭಾಗದಲ್ಲಿ ನಿರ್ಮಾಣದ ಆಟೋ ನಿಲ್ದಾಣಕ್ಕೆ 13 ಲಕ್ಷ ಅನುದಾನ ಒದಗಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ ಎಂದರು.ಕೆಲವು ಶ್ರೀಮಂತ ವರ್ಗದವರು ರಾಷ್ಟ್ರೀಯ ಹೆದ್ದಾರಿ ನಮ್ಮದೇ ಎಂಬಂತೆ ವರ್ತಿಸುತ್ತಿದ್ದು, ಅವರಿಗೆ ಬಡವರ ಬಗ್ಗೆ ಕಾಳಜಿ ಇರಬೇಕು. ಪಟ್ಟಣದ ಅನೇಕ ಭಾಗಗಳಲ್ಲಿ ಅಕ್ರಮವಾಗಿ ರಸ್ತೆಗಳಲ್ಲೇ ಮನೆ ನಿರ್ಮಿಸಿಕೊಳ್ಳುತ್ತಿರುವವರ ಬಗ್ಗೆ, ಪುರಸಭೆ ಕ್ರಮ ಕೈಗೊಳ್ಳಬೇಕಿದೆ, ಅಗತ್ಯ ದಾಖಲೆಗಳನ್ನು ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನಿಲ್ದಾಣಗಳ ಸ್ಥಾಪನೆಗೆ ಒತ್ತು ನೀಡಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಹಿಂದಿನ ಶಾಸಕ ವೈ.ಎಸ್.ವಿ. ದತ್ತ ಅವರು ಅನುದಾನ ಒದಗಿಸಿಕೊಟ್ಟು ಆಟೋ ನಿಲ್ದಾಣಗಳ ಸ್ಥಾಪನೆಗೆ ಸಹಕರಿಸಿದ್ದರು. ಆದರೆ ಚೆಕ್ ಪೋಸ್ಟ್ ಬಳಿಯಲ್ಲಿ ನಿರ್ಮಾಣ ಗೊಳ್ಳಬೇಕಿದ್ದ ನಿಲ್ದಾಣ ಕಾರಣಾಂತರಗಳಿಂದ ನೆನೆಗುದ್ದಿಗೆ ಬಿದ್ದಿತು. ಇದೀಗ ಶಾಸಕರಾದ ಆನಂದ್ ಅವರ ಪ್ರಯತ್ನದಿಂದಾಗಿ 4 ಲಕ್ಷ ಅನುದಾನ ನೀಡಿ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಮನು ಮರುಗುದ್ದಿ, ಶ್ರೀಕಾಂತ್, ಕುರುಬ ಸಮಾಜದ ಅಧ್ಯಕ್ಷ ಭೋಗಪ್ಪ, ಆಸಂದಿ ಕಲ್ಲೇಶ್, ಕೋಟೆ ನಂದೀಶ್, ರವಿ, ಬಂಜಾರ ಸಮಾಜದ ಅಧ್ಯಕ್ಷ ಕುಮಾರನಾಯ್ಕ, ಕೆಆರ್ ಐಡಿಎಲ್ ನಿಗಮದ ಎಇಇ ಅಶ್ವಿನಿ, ಗಿರೀಶ್ ಹಾಗೂ ಆಟೋ ಚಾಲಕರು ಸಂಘದ ಪದಾಧಿಕಾರಿಗಳು ಇದ್ದರು.

12ಕೆಕೆಡಿಯು1.

ಕಡೂರು ಪಟ್ಟಣದ ಬಸವೇಶ್ವರ ವೃತ್ತದ ಬಳಿಯಲ್ಲಿ 4 ಲಕ್ಷ ವೆಚ್ಚದಲ್ಲಿ ವೆಂಕಟೇಶ್ವರ ಆಟೋ ನಿಲ್ದಾಣದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್, ಮನುಮರುಗಿದ್ದಿ, ಶ್ರೀಕಾಂತ್, ಕಲ್ಲೇಶ್, ಭೋಗಪ್ಪ ಮತ್ತಿತರಿದ್ದರು.