ನರಸಿಂಹರಾಜಪುರ ರೈತ ಸೇವಾ ಕೇಂದ್ರಕ್ಕೆ ₹2 ಕೋಟಿ ಮಂಜೂರು: ಟಿ.ಡಿ.ರಾಜೇಗೌಡ

| Published : Dec 31 2024, 01:02 AM IST

ನರಸಿಂಹರಾಜಪುರ ರೈತ ಸೇವಾ ಕೇಂದ್ರಕ್ಕೆ ₹2 ಕೋಟಿ ಮಂಜೂರು: ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ತಾಲೂಕಿನಲ್ಲಿ ರೈತ ಸೇವಾ ಕೇಂದ್ರಕ್ಕೆ ಸರ್ಕಾರ ₹2 ಕೋಟಿ ಮಂಜೂರು ಮಾಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ಸೋಮವಾರ ಕೃಷಿ ಇಲಾಖೆ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜಕ್ಕೆ ಆಯ್ಕೆಯಾದ 5 ಜನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿ, ರೈತರ ಅನುಕೂಲಕ್ಕಾಗಿ ರೈತ ಸೇವಾ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಸರ್ಕಾರ ರೈತರ ಪರವಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದು ಇದನ್ನು ಪಕ್ಷಾತೀತವಾಗಿ ಕಟ್ಟ ಕಡೆಯ ರೈತರಿಗೂ ತಲುಪಿಸುವ ಜವಾಬ್ದಾರಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜಕ್ಕೆ ಸೇರಿದೆ. ರೈತರ ಅನುಕೂಲಕ್ಕೆ ಸರ್ಕಾರದಿಂದ ಅನುದಾನ ತಂದು ಕೊಡುವ ಭರವಸೆ ನೀಡಿದರು.

ತಾಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನಲ್ಲಿ ರೈತ ಸೇವಾ ಕೇಂದ್ರಕ್ಕೆ ಸರ್ಕಾರ ₹2 ಕೋಟಿ ಮಂಜೂರು ಮಾಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸೋಮವಾರ ಕೃಷಿ ಇಲಾಖೆ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜಕ್ಕೆ ಆಯ್ಕೆಯಾದ 5 ಜನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿ, ರೈತರ ಅನುಕೂಲಕ್ಕಾಗಿ ರೈತ ಸೇವಾ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಸರ್ಕಾರ ರೈತರ ಪರವಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದು ಇದನ್ನು ಪಕ್ಷಾತೀತವಾಗಿ ಕಟ್ಟ ಕಡೆಯ ರೈತರಿಗೂ ತಲುಪಿಸುವ ಜವಾಬ್ದಾರಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜಕ್ಕೆ ಸೇರಿದೆ. ರೈತರ ಅನುಕೂಲಕ್ಕೆ ಸರ್ಕಾರದಿಂದ ಅನುದಾನ ತಂದು ಕೊಡುವ ಭರವಸೆ ನೀಡಿದರು.

ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಮಾತನಾಡಿ, ಪ್ರಸ್ತುತ ತಾಲೂಕು ಕೃಷಿಕ ಸಮಾಜದಲ್ಲಿ ಹಳೇ ಬೇರು, ಹೊಸ ಚಿಗರಿನಂತೆ ಅನುಭವ ಇರುವ ಹಾಗೂ ಯುವ ರೈತರು ಒಟ್ಟಾಗಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ನರಸಿಂಹರಾಜಪುರ ರೈತರಿಗೆ ಬೇಕಾದ ಕೃಷಿ ಪರಿಕರ ಒದಗಿಸುವ ಕೆಲಸ ಮಾಡಿ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೇರ್ ನಟರಾಜ, ತಾಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಉಪಾಧ್ಯಕ್ಷ ಡಿ.ಜಿಮಂಜಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ನವೀನ್,ಖಜಾಂಚಿ ಬಿ.ಎಸ್.ಚೇತನ್‌, ಜಿಲ್ಲಾ ಪ್ರತಿನಿಧಿ ಪಿ.ಕೆ.ಬಸವರಾಜಪ್ಪ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗರಾಜ್‌,ಎನ್.ಪಿ.ರಮೇಶ್‌, ಎಚ್.ಎನ್‌.ರವಿಶಂಕರ್ ಇದ್ದರು.

-- ಬಾಕ್ಸ್ --

ತಾಲೂಕು ಕೃಷಿಕ ಸಮಾಜದ 15 ನಿರ್ದೇಶಕರ ಪೈಕಿ 5 ಜನ ಪದಾಧಿಕಾರಿಗಳು ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮುಂದಿನ 5 ವರ್ಷದ ಅವಧಿಗೆ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ಎಸ್‌.ಬಿ.ಮಹೇಶ್‌ ಕಾರ್ಯ ನಿರ್ವಹಿಸಿದರು.

ತಾಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಬಿ.ಕೆ. ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ಡಿ.ಜಿ.ಮಂಜಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ನವೀನ್, ಖಜಾಂಚಿ ಬಿ.ಎಸ್‌. ಚೇತನ್‌, ಜಿಲ್ಲಾ ಪ್ರತಿನಿಧಿಯಾಗಿ ಪಿ.ಕೆ.ಬಸವರಾಜಪ್ಪ ಅವಿರೋಧ ಆಯ್ಕೆಯಾದವರು.