ಭಾರತೀಯ ಸಹಕಾರ ಬ್ಯಾಂಕ್‌ಗೆ 36.31 ಲಕ್ಷ ರು. ಲಾಭ

| Published : Sep 15 2024, 01:51 AM IST

ಸಾರಾಂಶ

ಚಾಮರಾಜನಗರದ ಡಾ.ಬಿ.ಅರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಭಾರತೀಯ ಸಹಕಾರ ಬ್ಯಾಂಕ್‌ನ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಬ್ಯಾಂಕ್ ಅಧ್ಯಕ್ಷ ಎನ್.ಬಿ.ರಾಜಶೇಖರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಭಾರತೀಯ ಸಹಕಾರ ಬ್ಯಾಂಕ್ 2023-24ನೇ ಸಾಲಿನಲ್ಲಿ 32.25 ಕೋಟಿ ರು.ಗಳ ದುಡಿಯುವ ಬಂಡವಾಳ ಮಾಡಿದ್ದು, 36.31 ಲಕ್ಷ ರು. ಲಾಭಗಳಿಸಿದೆ. ಇದರಲ್ಲಿ ಸದಸ್ಯರಿಗೆ ಶೇ.10 ರಷ್ಟು ಲಾಭಾಂಶ ನೀಡುವುದಾಗಿ ಬ್ಯಾಂಕ್ ಅಧ್ಯಕ್ಷ ಎನ್.ಬಿ.ರಾಜಶೇಖರ ಹೇಳಿದರು.ನಗರದ ಡಾ.ಬಿ.ಅರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಭಾರತೀಯ ಸಹಕಾರ ಬ್ಯಾಂಕ್‌ನ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಸ್ತುತ ಬ್ಯಾಂಕ್ 11,685 ಸದಸ್ಯರನ್ನು ಹೊಂದಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಬ್ಯಾಂಕ್ ಶಾಖೆ ತೆರೆದು ಉತ್ತಮ ಸೇವೆ ನೀಡಲಾಗುತ್ತಿದೆ. ಬ್ಯಾಂಕ್‌ನಿಂದ ಯಶಸ್ವಿ ಯೋಜನೆ, ಡಿಜಿಟಲ್ ಬ್ಯಾಂಕಿಂಗ್, ನಿಶ್ಚಿತ ಠೇವಣಿ ವ್ಯವಸ್ಥೆಯನ್ನು ಮಾಡಿದ್ದು ಪೂರ್ಣ ವ್ಯವಹಾರವೂ ಗಣಕೀಕೃತಗೊಂಡಿರುತ್ತದೆ. ಮೌಲ್ಯವರ್ಧಿತ ಸೇವೆಗಳಾದ ಕ್ಯೂ-ಆರ್ ಕೋಡ್, ಮೊಬೈಲ್ ಆ್ಯಪ್ ಯೋಜನೆ ಜಾರಿಗೊಳಿಸಿ ಇಂದಿನ ಸಭೆಯಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ. ಸದಸ್ಯರು, ಗ್ರಾಹಕರು ಹೆಚ್ಚಿನ ಠೇವಣಿ ಇಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಉತ್ತಮ ಠೇವಣಿ ನೀಡಿರುವ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಉತ್ತಮ ವಹಿವಾಟು ನಡೆಸಿರುವ ಸದಸ್ಯರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಎಂ.ಎಸ್.ವೀಣಾ, ನಿರ್ದೇಶಕ ರಾದ ಆರ್.ಪದ್ಮಾವತಿ ಬಾಯಿ, ಆರ್. ಜಗದೀಶ್ ನಾಯ್ಕ, ಡಿ.ನಾಗುನಾಯ್ಕ, ಕೆ.ಕರುಣಾಕರ, ನಾಗೇಂದ್ರ, ಕೆ.ಎಂ.ಮಹದೇವಸ್ವಾಮಿ,ಕೃಷ್ಣನಾಯಕ, ಎ.ಎಂ.ಪ್ರಭುಸ್ವಾಮಿ, ಉಪೇಂದ್ರ ಕುಮಾರ್, ಆರ್.ಶಿವಾಜಿ, ರಾಜಶೇಖರ, ವೃತ್ತಿಪರ ನಿರ್ದೇಶಕಿ ರೂಪಶ್ರೀ, ಕಾರ್ಯಪರ ನಿರ್ದೇಶಕ ಎಂ.ಸುಬ್ಬು, ಪದನಿಮಿತ್ತ ನಿರ್ದೇಶಕಿ ಎನ್.ಜೆ.ವನಿತ, ಸದಸ್ಯರು ಭಾಗವಹಿಸಿದ್ದರು. ಜೆ.ಪಿ.ಮಹೇಶ್ ಪ್ರಾರ್ಥಿಸಿದರು.