ಕುಶಾಲನಗರ: ಬೆಂಗಳೂರಿನ ಮನಮೋಹನ್ ಸಿಂಗ್ ವಿಶ್ವವಿದ್ಯಾಲಯದ ಬಿಕಾಂ ಪದವಿ ಪರೀಕ್ಷೆಯಲ್ಲಿ ದೀಕ್ಷಾಳಿಗೆ 3ನೇ ರ‍್ಯಾಂಕ್ ಲಭಿಸಿದೆ.ಈಕೆ ಮೂಲತಃ ಜಿಲ್ಲೆಯ ತೊರೆನೂರು ಮೂಲದ ಕೊಲ್ಲಿಯ ಟಿ.ಕೆ. ಪಾಲಾಕ್ಷಪ್ಪ ಮತ್ತು ಲಲಿತ ದಂಪತಿಯ ಮೊಮ್ಮಗಳು, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುಂಡುಗೋಡು ಗ್ರಾಮದ ಕೃಷಿಕ ಕುಟುಂಬದ ಎಂ.ಬಿ. ಪ್ರಸನ್ನ ಹಾಗೂ ಮಧು ದಂಪತಿ ಪುತ್ರಿ.
ಈಕೆ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ತನಕ ಅಭ್ಯಾಸ ಮಾಡಿದ್ದು, ಬೆಂಗಳೂರಿನ ಮಲ್ಲೇಶ್ವರಂ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಕಾಂ ಪದವಿ ಅಭ್ಯಾಸ ಮಾಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಮಲ್ಲೇಶ್ವರಂ ಮಹಿಳಾ ಕಾಲೇಜಿನಲ್ಲಿ ಮತ್ತು ಕೊಡಗು ಜಿಲ್ಲಾ ವೀರಶೈವ- ಲಿಂಗಾಯತ ನೌಕರರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು....(ಕ್ಯಾಪ್ಸನ್:)....
ವಿದ್ಯಾರ್ಥಿನಿ ಎಂ.ಪಿ. ದೀಕ್ಷಾ ಅವರನ್ನು ಸನ್ಮಾಸಲಾಯಿತು.