ಐದು ಗ್ಯಾರಂಟಿ ಕೊಡಿ ಎಂದು ಜನ ಕೇಳಿದ್ದರಾ? ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಿಡಿ

| Published : Nov 09 2024, 01:01 AM IST / Updated: Nov 09 2024, 10:55 AM IST

ಐದು ಗ್ಯಾರಂಟಿ ಕೊಡಿ ಎಂದು ಜನ ಕೇಳಿದ್ದರಾ? ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಐದು ಗ್ಯಾರಂಟಿ ಕೊಡಿ ಎಂದು ಜನ ಕೇಳಿದ್ದರಾ? ಹಾಲಿನ ಬೆಂಬಲ ಬೆಲೆ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್ ನಂಬಿದರೆ ಏನಾಗುತ್ತೆ ಅನ್ನೋದಕ್ಕೆ ಜನರಿಗೆ ಇದೊಂದು ಅದ್ಭುತ ಪಾಠವಾಗಿದೆ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಚನ್ನಪಟ್ಟಣ ಕ್ಷೇತ್ರದ ಕೂಡ್ಲೂರು ಹಾಗೂ ಮಳೂರು ಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರು, ಎರಡು ಚುನಾವಣೆಯಲ್ಲಿ ನನ್ನನ್ನು ಕುತಂತ್ರದಿಂದ ಸೋಲಿಸಿದರು. ರಾಮನಗರದಲ್ಲಿ ಗಿಫ್ಟ್ ಕೊಟ್ಟು ಸೋಲಿಸಿದರು. ಈಗಲೂ ರಾತ್ರಿ ನಾಲ್ಕು ಗಂಟೆಗೆ ಬಂದು ಕೂಪನ್ ಕೊಡಬಹುದು. ರೇಷನ್ ಕಾರ್ಡ್ ಕೂಪನ್ ಕೊಡ್ತಾರೆ, ಇದು ಕಾಂಗ್ರೆಸ್ ನಾಯಕರ ಕೊಡುಗೆಯೇ ಎಂದು ವಾಗ್ದಾಳಿ ನಡೆಸಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ಅಭಿವೃದ್ಧಿಗೆ ಒಂದೂವರೆ ಸಾವಿರ ಕೋಟಿ ರು. ಅನುದಾನ ತಂದಿದ್ದಾರೆ. ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನ ಮಾಡಿದ್ದಾರೆ. 150 ಕೋಟಿ ರು. ವೆಚ್ಚದಲ್ಲಿ ಮೊದಲನೇ ಹಂತದಲ್ಲಿ ರೇಷ್ಮೆ ಮಾರುಕಟ್ಟೆ ಮಾಡೋದಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಇದೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಉದ್ಯೋಗ ಮೇಳ ನಡೆಯಿತು. ಅದು ಮಂಡ್ಯಕ್ಕೆ ಸೀಮಿತವಾಗಿರಲಿಲ್ಲ. 158 ಕಂಪನಿಗಳಲ್ಲಿ ಉದ್ಯೋಗ ಮೇಳಕ್ಕೆ ಬಂದಿದ್ದರು. ಅದರಲ್ಲಿ 1200 ಜನಕ್ಕೆ ಉದ್ಯೋಗ ಸಿಕ್ಕಿದೆ. ರಾಮನಗರ ಮತ್ತು ಮಂಡ್ಯದ ಮದ್ಯ ಭಾಗದಲ್ಲಿ ಕೈಗಾರಿಕಾ ಸ್ಥಾಪನೆಗೆ ಸರಣಿ ಸಭೆ ಮಾಡುತ್ತಿದ್ದಾರೆ. 25 ಸಾವಿರ ಜನಕ್ಕೆ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಭಾಗಿಯಾಗಿದ್ದರು.